Saturday, January 18, 2025

ದೇಶದ 50ನೇ ಸಿಜೆಐಯಾಗಿ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್​ನ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಹಿಂದೆ ಸಿಜೆಐ ಆಗಿದ್ದ ಯು.ಉದಯ್ ಲಲಿತ್ ನಿವೃತ್ತಿ ಹಿನ್ನಲೆ ಡಿವೈ ಚಂದ್ರಚೂಡ್​ ಅವರು ಇತ್ತೀಚಿಗೆ ಮುಖ್ಯನ್ಯಾಯಮೂರ್ತಿಯಾಗಿ ಘೋಷಣೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚಣ ಕಾರ್ಯಕ್ರಮದಲ್ಲಿ ಸರ್ವೋಚ್ಛ ನ್ಯಾಯಾಲಯದ 50ನೇ ಸಿಜೆಐಯಾಗಿ ಸ್ವೀಕಾರ ಮಾಡಿದರು.

ನ್ಯಾಯಮೂರ್ತಿ ಚಂದ್ರಚೂಡ್ ಅವರು 2024 ರ ನವೆಂಬರ್ 10ರವರೆಗೆ ಸಿಜೆಐ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ. ಇವರ ತಂದೆ ಕೂಡಾ ಸಿಜೆಐ ಆಗಿ ಏಳು ವರ್ಷ ಕಾಲ ನಿಭಾಯಿಸಿದ್ದರು.

RELATED ARTICLES

Related Articles

TRENDING ARTICLES