Monday, December 23, 2024

ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜರು : ಸಿ.ಟಿ. ರವಿ

ಚಿಕ್ಕಮಗಳೂರು : ಹಿಂದೂ ಅಂತ ಯಾರು ತಮ್ಮನ್ನ ಧರ್ಮದ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರೋ ಅವ್ರು ಕಾಂಗ್ರೆಸ್​ಗೆ ವೋಟ್ ಹಾಕಬಾರದು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು.

ಇನ್ನು, ಸತೀಶ್ ಜಾರಕಿಹೊಳಿ ಹಾಗೂ ಅವರ ಪಾರ್ಟಿಗೆ ಹಿಂದೂ ಸಾಮರ್ಥ್ಯ ಏನೂ ಅಂತ ತೋರಿಸಬೇಕು. ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜ, ಮರಾಠ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ವಿಜಯನಗರದ ರಕ್ಷಣೆಯಲ್ಲಿ‌ ಮುಂಚೂಣಿಯಲ್ಲಿದ್ದ ನಾಯಕ ಸಮೂದಾಯಕ್ಕೂ ಅಪಮಾನ ಮಾಡಿದ್ದಾರೆ ಎಂದರು.

ಅದಲ್ಲದೇ, ನೇತಾಜಿ ಸುಭಾಷ್ ಆಜಾದಿ ಹಿಂದೂ ಪೌಜ್ ಕಟ್ಟಿದ್ರು ನೇತಾಜಿ ಅವ್ರಿಗೆ ಅಪಮಾನ ಮಾಡಿದ್ದಾರೆ. ಸೈನ್ಯಕ್ಕೆ‌ ಹೋದ್ರೆ ಅವ್ರು ಘೋಷಣೆ ಕೂಗೋದೆ ಜೈಹಿಂದ್ ಅಂತ ಸೈನಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಧ್ಯಕ್ಷರಾಗಿ ತನ್ನ ತಪ್ಪಿಗೆ ಕ್ಷಮೆ ಕೇಳದೆ ದುರಾಂಕಾರದ ವರ್ತನೆ ತೋರಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ. ಟಿ.ರವಿ ಹೇಳಿದರು.

RELATED ARTICLES

Related Articles

TRENDING ARTICLES