Wednesday, January 22, 2025

ಫಸ್ಟ್ ಡೇ ಕಲೆಕ್ಷನ್ 3 ಕೋಟಿ.. 10 ಕೋಟಿಯತ್ತ ಬನಾರಸ್

‘ಬನಾರಸ್.. ಬಗೆದಷ್ಟೂ ಬೆರಗು’ ಅಂದಿದ್ದ ಡೈರೆಕ್ಟರ್ ಜಯತೀರ್ಥ, ಕೊನೆಗೂ ತಮ್ಮ ಮಾತನ್ನ ಉಳಿಸಿಕೊಂಡಿದ್ದಾರೆ. ಪಂಚಭಾಷೆಯಲ್ಲಿ ಪ್ರೇಕ್ಷಕರನ್ನ ರಂಜಿಸೋದ್ರಲ್ಲಿ ಸಕ್ಸಸ್ ಆಗಿದೆ ದೃಶ್ಯಕಾವ್ಯ. ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನವೇ ಮೂರು ಕೋಟಿ ಗಳಿಸಿರೋ ಬನಾರಸ್, ಹತ್ತು ಕೋಟಿ ಕ್ಲಬ್​ನತ್ತ ನಾಗಾಲೋಟ ಮುಂದುವರೆಸಿದೆ.

  • ಬಗೆದಷ್ಟೂ ಬೆರಗಿನ ಕಥೆ.. ಪ್ರೇಮ ದೃಶ್ಯಕಾವ್ಯಕ್ಕೆ ಸೈನ್ಸ್ ಟಚ್

ಕ್ರಿಯೇಟಿವ್ ಮೈಂಡ್ಸ್ ಎಲ್ಲಿರತ್ತೋ ಅಲ್ಲಿ ಹೊಸತನ ಎದ್ದು ಕಾಣುತ್ತೆ. ಕನ್ನಡ ಚಿತ್ರರಂಗದ ಮಟ್ಟಿಗೆ ಬನಾರಸ್ ಒಂದು ವಿನೂತನ ಪ್ರಯತ್ನ. ಇದರಲ್ಲಿ ಎರಡು ಮಾತಿಲ್ಲ. ಆದ್ರೆ ಅದ್ರ ಹಿಂದಿರೋ ಮಾಸ್ಟರ್​ಮೈಂಡ್ ಜಯತೀರ್ಥ ಅನ್ನೋದನ್ನ ಒಪ್ಪಿಕೊಳ್ಳಬೇಕು. ಪ್ರತಿ ಸಿನಿಮಾದಲ್ಲೂ ಹೊಸ ಜಾನರ್ ಟ್ರೈ ಮಾಡೋ ಇವ್ರು, ಬೆಲ್​ಬಾಟಂ ಬಳಿಕ ಬನಾರಸ್​​ ಅನ್ನೋ ಬ್ಯೂಟಿಫುಲ್ ಪ್ರೇಮ ದೃಶ್ಯಕಾವ್ಯಕ್ಕೆ ಸೈನ್ಸ್ ಟಚ್ ನೀಡಿದ್ದಾರೆ.

ಕಳೆದ ವಾರ ತೆರೆಕಂಡ ಬನಾರಸ್​ ಮೂಲಕ ಝೈದ್ ಖಾನ್ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಅಷ್ಟೇ ಅಲ್ಲ, ಅವ್ರೊಟ್ಟಿಗೆ ಸೋನಲ್ ಸೌಂದರ್ಯ ಹಾಗೂ ಸುಜಯ್ ಶಾಸ್ತ್ರಿಯ ಕಾಮಿಡಿ ಕೂಡ ಚಿತ್ರದ ಗಮ್ಮತ್ತು ಹೆಚ್ಚಿಸಿದೆ. ಸೀದಾ ಸಾದಾ ಲವ್ ಸ್ಟೋರಿ ಆಗಿರದ ಬನಾರಸ್​ನಲ್ಲಿ ಝೈದ್- ಸೋನಲ್ ಪ್ರೇಮ ಮಹಲ್​ಗೆ ವೈಜ್ಞಾನಿಕತೆಯ ಲಿಂಕ್ ಕೊಟ್ಟಿರೋದು ಟೆಕ್ನಾಲಜಿ ಅಪ್ಡೇಟ್ ಆಗಿರೋ ಈ ಜನರೇಷನ್​ಗೆ ಇಂಪ್ರೆಸ್ಸೀವ್ ಅನಿಸಿದೆ.

ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ತೆರೆಕಂಡಿರೋ ಈ ಪ್ಯಾನ್ ಇಂಡಿಯಾ ಮೂವಿ, ದೇಶದ ಮೂಲೆ ಮೂಲೆಯಲ್ಲಿ ನೋಡಿದವರಿಗೆಲ್ಲಾ ರುಚಿಸುತ್ತಿದೆ. ವೈರಾಗ್ಯಕ್ಕೆ ಕೇರ್ ಆಫ್ ಅಡ್ರೆಸ್ ಆಗಿರೋ ಕಾಶಿಯಲ್ಲಿ ಪ್ರೇಮ ಹುಟ್ಟೋದು ಅಂದ್ರೇನೇ ಇಂಟರೆಸ್ಟಿಂಗ್. ಅಂದಹಾಗೆ ಈ ಸಿನಿಮಾ ಮೊದಲ ದಿನವೇ ಮೂರು ಕೋಟಿ ಗಳಿಕೆಯಿಂದ ಪ್ರಶಂಸೆ, ಪ್ರತಿಕ್ರಿಯೆಗಳನ್ನ ಪಡೆದಿತ್ತು.

ಇದೀಗ 10 ಕೋಟಿ ಕ್ಲಬ್​ನ ಗಡಿಯಲ್ಲಿರೋ ಬನಾರಸ್, ಝೈದ್​ ಕರಿಯರ್​ಗೆ ಒಳ್ಳೆಯ ಕಿಕ್​ಸ್ಟಾರ್ಟ್​ ನೀಡಿದೆ. ಇನ್ನು ಚಿತ್ರತಂಡ ಕೂಡ ದಾವಣಗೆರೆ, ಕೊಪ್ಪಳವರೆಗೂ ನಾರ್ತ್ ಕರ್ನಾಟಕ ಕಡೆ ವಿಜಯಯಾತ್ರೆ ಮುಗಿಸಿ ಬಂದಿದೆ. ಸದ್ಯ ನಾಳೆಯಿಂದ ಮಂಡ್ಯ, ಮೈಸೂರ್ ಕಡೆ ಪ್ರವಾಸ ಮಾಡೋ ಯೋಜನೆಯಲ್ಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES