Monday, December 23, 2024

ರಾಜಕೀಯ ಷಡ್ಯಂತ್ರಗಳಿಗೆ ನಾನು ಬಗ್ಗುವುದಿಲ್ಲ: ಸಚಿವ ಬೈರತಿ ಬಸವರಾಜ್

ದಾವಣಗೆರೆ: ದಾವಣಗೆರೆಯ ಜಿಎಂಐಟಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದು, ಕಳೆದ‌ ಮೂರು ದಿನಗಳ ಹಿಂದೆ ವೈರಲ್ ಆದ ಆಡಿಯೋ ಪ್ರಕರಣ. ಆ ಆಡಿಯೋಕ್ಕೆ ನನಗೆ ಸಂಬಂಧ ಇಲ್ಲ, ಉದ್ದೇಶಪೂರ್ವಕವಾಗಿ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ಆ ಆಡಿಯೋ ಒಂದು ಷಡ್ಯಂತ್ರ, ತನಿಖೆಯಾಗಲಿ ಸತ್ಯ ಹೊರಬರಲಿ ಎಂದ ಬೈರತಿ ಬಸವರಾಜ್.

ನಮ್ಮ ಇಲಾಖೆಯಲ್ಲಿ ತಪ್ಪು ಮಾಡಿದ್ದರೇ ಅವರು ಅನುಭವಿಸುತ್ತಾರೆ. ಚುನಾವಣೆ ಹತ್ತಿರ ಬರುತ್ತಿದೆ ಹಾಗಾಗಿ ಇಂತಹ ಷಡ್ಯಂತ್ರಗಳು ನಡೆಯುತ್ತಿರುತ್ತವೆ. ಹಿಂದುಳಿದ ವರ್ಗದ ಸಚಿವರನ್ನೇ ಗುರಿಯಾಗಿಸಿಕೊಂಡು ಷಡ್ಯಂತ್ರ ರೂಪಿಸಲಾಗುತ್ತಿದೆ. ಈ ಹಿಂದೆ ಈಶ್ವರಪ್ಪನವರ ಮೇಲೆ ಇಂತಹದೊಂದು ಆರೋಪ ಬಂದಿತ್ತು. ಅವರು ಶುದ್ಧಹಸ್ತರಾಗಿ ಪ್ರಕರಣದಲ್ಲಿ ಹೊರಬಂದಿದ್ದಾರೆ. ಈಗ ನನ್ನ ಮೇಲೆ ಗೂಭೆ ಕೂರಿಸುತ್ತಿದ್ದಾರೆ. ಇದರ ವಿರುದ್ಧ ಕಾನೂನು ತಜ್ನರ ಸಲಹೆ ಪಡೆದು ಹೋರಾಡ ಮಾಡುತ್ತೇನೆ. ಯಾರಿಂದಲೋ ವಿಡಿಯೋ ಮಾಡಿಸಿ ಆಮಿಷವೊಡ್ಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ಸ್ ನ ಕುಮ್ಮಕ್ಕು ಇದೆ. ಗುಲ್ಬರ್ಗದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಗಿತ್ತು.
ಅದನ್ನು ಸಹಿಸದೇ ಈ ರೀತಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES