ಯಾದಗಿರಿ: ಜಮೀನು ಲೀಸ್ಗೆ ಸಿಕ್ಕಿಲ್ಲವೆಂಬ ಧ್ವೇಷಕ್ಕೆ ಕಳೆನಾಶಕದಿಂದ ಬೆಳೆ ನಾಶ ಮಾಡಿದ ಕಿರಾತಕರು, ಬೆಳೆ ನಾಶ ಮಾಡಿ ಎರಡು ತಿಂಗಳ ಗತಿಸಿದರು ಕ್ರಮಕೈಗೊಳ್ಳದ ಪೊಲೀಸರು.
ವಡಗೇರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು, ಎರಡು ತಿಂಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಬೆಳೆ ಹಾನಿಗೊಳಗಾದ ರೈತ ,ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಉಳ್ಳೆಸೂಗುರು ಗ್ರಾಮದಲ್ಲಿ ಬೆಳೆ ನಾಶ, ಗ್ರಾಮದ ರೈತ ನಾಗಪ್ಪ ಬೆಳೆಯುತ್ತಿರುವ ಹತ್ತಿ ಬೆಳೆ ಕಳೆನಾಶಕದಿಂದ ಸುಟ್ಟು ಹಾಕಿದ ಆರೋಪಿಗಳು.
ಸೆಪ್ಟೆಂಬರ್ 5 ರಂದು ಗ್ರಾಮದ ಮರಿಲಿಂಗಪ್ಪ ಹಾಗೂ ಮಾಳಪ್ಪ ಅವರು 7 ಎಕರೆ ಹತ್ತಿ ಬೆಳೆ ನಾಶ ಮಾಡಿದ್ದಾರೆ.
ತಮಗೆ ಕೃಷಿ ಮಾಡಲು ಬೆರೆಯವರ ಜಮೀನು ಲೀಸ್ಗೆ ಸಿಗದ ಹಿನ್ನಲೆ, ಲೀಸ್ ಪಡೆಯಲು ಉದ್ದೇಶಿಸಿದ ಜಮೀನಿನಲ್ಲಿರುವ ಹತ್ತಿ ಬೆಳೆ ನಾಶ ಮಾಡಿದ್ದಾರೆ.
ಗ್ರಾಮದ ಮುಖಂಡರ ಭೂಮಿಯನ್ನು ಲೀಸ್ಗೆ ಪಡೆದು 15 ಎಕರೆ ಭೂಮಿಯಲ್ಲಿ ಹತ್ತಿ ಬೆಳೆಯುತ್ತಿರುವ ರೈತ ನಾಗಪ್ಪ, ಆದರೆ,7 ಎಕರೆ ಹತ್ತಿ ಬೆಳೆಯನ್ನು ಕಳೆ ನಾಶಕದಿಂದ ಹತ್ತಿ ನಾಶ ಮಾಡಿದ ಕಿರಾತಕರು.5 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಹತ್ತಿ ಬೆಳೆದ ರೈತ,
13 ಲಕ್ಷ ರೂಪಾಯಿ ಲಾಭದ ನಿರೀಕ್ಷೆ ಹೊಂದಿದ್ದನು. ಕೊಯ್ಲಿಗೆ ಬಂದ ಹತ್ತಿ ನಾಶ ಮಾಡಿದಕ್ಕೆ ರೈತ ಕಂಗಾಲಾಗಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡು ನ್ಯಾಯ ಒದಗಿಸಬೇಕೆಂದು ರೈತ ನಾಗಪ್ಪ ಆಗ್ರಹ.