Sunday, December 22, 2024

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್.. ಹಿ ಈಸ್ ಗೋಲ್ಡನ್ ಸ್ಟಾರ್

ನಗುವುದರಲ್ಲಿ ರೂಬಿ, ನಗಿಸುವುದೇ ಹಾಬಿ ಆಗಿಸಿಕೊಂಡಿರೋ ಸ್ಯಾಂಡಲ್​ವುಡ್​ನ ಗೋಲ್ಡನ್ ಹಾರ್ಟ್​ ಇರೋ ಸೂಪರ್ ಸ್ಟಾರ್ ಅಂದ್ರೆ ಅದು ಮಳೆ ಹುಡ್ಗ ಗಣೇಶ್. ಕಾಮಿಡಿ ಟೈಂ ಜೊತೆ ಇವ್ರು ಎಮೋಷನ್ಸ್​ನ ಎಕ್ಸ್​ಪ್ರೆಸ್ ಮಾಡೋ ಪರಿಗೆ ತಲೆದೂಗದವರೇ ಇಲ್ಲ. ಇದೀಗ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅಂತಿದ್ದಾರೆ ನಮ್ಮ ಗೋಲ್ಡನ್ ಸ್ಟಾರ್.

  • ಗಣಿ ಖಜಾನೆಯಿಂದ ಮತ್ತೊಂದು ಡ್ಯಾನ್ಸಿಂಗ್ ನಂಬರ್ ಔಟ್
  • ನವೆಂಬರ್ 25ಕ್ಕೆ ತ್ರಿಬಲ್ ರೈಡಿಂಗ್.. ಇದು ಫನ್​ರೈಡ್ ಜರ್ನಿ
  • ಸ್ಯಾಂಪಲ್ಸ್​ನಿಂದ ನಾಡಿಮಿಡಿತ ಹೆಚ್ಚಿಸಿದ ಕಲರ್​ಫುಲ್ ಕಥೆ..!

ಇದು ತ್ರಿಬಲ್ ರೈಡಿಂಗ್ ಆಲ್ಬಂನ ಮತ್ತೊಂದು ಕಲರ್​ಫುಲ್ ಡ್ಯಾನ್ಸಿಂಗ್ ನಂಬರ್. ಈ ಹಿಂದೆ ಯಟ್ಟ ಯಟ್ಟ ಸಾಂಗ್ ಮೂಲಕ ಎಲ್ಲರ ಮೈ ಕೈ ಕುಣಿಸಿದ್ದ ಗಣಿ, ಇದೀಗ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅಂತ ಡ್ಯಾನ್ಸ್ ಫ್ಲೋರ್​ಗೆ ಇಳಿದಿದ್ದಾರೆ. ಗಾಳಿಪಟ 2 ಬಳಿಕ ಗಣಿಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಸ್ಯಾಂಪಲ್ಸ್​ನಿಂದ ನೋಡುಗರಲ್ಲಿ ಕ್ರೇಜ್ ಹೆಚ್ಚಿಸಿದೆ.

ಸದ್ಯ ಈ ನ್ಯೂ ಸಾಂಗ್​ಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಸಾಯಿ ಕಾರ್ತಿಕ್ ಮ್ಯೂಸಿಕ್ ಹಾಗೂ ವಿಜಯ್ ಪ್ರಕಾಶ್ ಗಾಯನವಿದೆ. ದುಬಾರಿ ಸೆಟ್​ನಲ್ಲಿ ಗಣಿ ಡ್ಯಾನ್ಸ್ ಮಾಡಿರೋ ಪರಿ ಎಂಥವ್ರೂ ಕುಣಿಯಬೇಕೆನಿಸುತ್ತೆ. ಕಾರಣ ಅದ್ರ ಹಿಂದಿರೋ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್. ಯೆಸ್.. ಚುಟು ಚುಟು ಫೇಮ್ ಭೂಷಣ್ ನಿರ್ದೇಶನದಲ್ಲಿ ಈ ಸಾಂಗ್ ಮೂಡಿಬಂದಿದ್ದು, ಗಣಿ ಮ್ಯೂಸಿಕಲ್ ಹಿಟ್ ಲಿಸ್ಟ್ ಸೇರಿದೆ.

ಮಹೇಶ್ ಗೌಡ ನಿರ್ದೇಶನದ ಹಾಗೂ ರಾಮ್ ಗೋಪಾಲ್ ನಿರ್ಮಾಣದ ಈ ಸಿನಿಮಾ ಹಾಡುಗಳಿಂದ ಹಂಗಾಮ ಮಾಡ್ತಿತ್ತು. ಅಲ್ಲದೆ, ಟೀಸರ್ ಝಲಕ್​ನಿಂದ ಗಣಿ ಮತ್ತೊಮ್ಮೆ ಡಾಕ್ಟರ್ ಆಗಿ ಹಲ್​ಚಲ್ ಎಬ್ಬಿಸೋ ಮನ್ಸೂಚನೆ ನೀಡಿದ್ರು. ಕೊರೋನಾ ಸಮಯದಲ್ಲಿ ಕೊರೋನಾ ಆಸ್ಪತ್ರೆಯಲ್ಲೇ ಚಿತ್ರಿಸಿರೋ ರೋಚಕ ಕ್ಷಣಗಳನ್ನು ನೆನೆದರು ಗೋಲ್ಡನ್ ಸ್ಟಾರ್.

ಬೈಟ್: ಗಣೇಶ್, ನಟ

ಬೈಟ್: ಮಹೇಶ್ ಗೌಡ, ನಿರ್ದೇಶಕ

ಬೈಟ್: ರಾಮ್​ ಗೋಪಾಲ್, ನಿರ್ಮಾಪಕ

ಇನ್ನು ಗಣಿ ಸಿನಿಮಾ ಅಂದ್ಮೇಲೆ ಅಲ್ಲಿ ಕನಿಷ್ಟ ಇಬ್ಬರು ಮೂವರು ಹೀರೋಯಿನ್ಸ್ ಇರಲೇಬೇಕು. ಈ ಚಿತ್ರದಲ್ಲಿ ಬರೋಬ್ಬರಿ ಮೂರು ಮಂದಿ ಗ್ಲಾಮರ್ ಡಾಲ್ಸ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಗೋಲ್ಡನ್ ಸ್ಟಾರ್. ಹೌದು.. ಶ್ಯಾನೆ ಟಾಪ್ ಹುಡ್ಗಿ ಅದಿತಿ ಪ್ರಭುದೇವ, ಜೊತೆ ಜೊತೆಯಲಿ ಸೀರಿಯಲ್ ಫೇಮ್ ಮೇಘಾ ಶೆಟ್ಟಿ ಹಾಗೂ ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಚಿತ್ರದ ಲೀಡ್​ನಲ್ಲಿದ್ದಾರೆ.

ಬೈಟ್: ಅದಿತಿ ಪ್ರಭುದೇವ, ನಟಿ

ಬೈಟ್: ಮೇಘ ಶೆಟ್ಟಿ, ನಟಿ

ಬೈಟ್: ರಚನಾ ಇಂದರ್, ನಟಿ

ಈ ಸ್ಪೆಷಲ್ ಸಾಂಗ್ ಜೊತೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ ಚಿತ್ರತಂಡ.  ಇದೇ ತಿಂಗಳಾಂತ್ಯಕ್ಕೆ, ಅಂದ್ರೆ ನವೆಂಬರ್ 25ಕ್ಕೆ ತ್ರಿಬಲ್ ರೈಡಿಂಗ್ ತೆರೆಗೆ ಬರಲಿದೆ. ಇದು ಪಕ್ಕಾ ಕಮರ್ಷಿಯಲ್ ಎಂಟರ್​ಟೈನರ್ ಆಗಿದ್ದು, ಕಾಮಿಡಿಯಿಂದ ನೋಡುಗರಿಗೆ ಮಸ್ತ್ ಮನೆರಂಜನೆ ನೀಡಲಿದೆ. ಒಟ್ಟಾರೆ ಗಣಿಗೆ ಗೋಲ್ಡನ್ ಡೇಸ್ ಮತ್ತೆ ಮರುಕಳಿಸುತ್ತಿದ್ದು, ಬಹುದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗೋ ಲಕ್ಷಣ ತೋರಿದೆ ತ್ರಿಬಲ್ ರೈಡಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES