Thursday, December 26, 2024

ಚಂದ್ರ ಗ್ರಹಣ ಹಿನ್ನೆಲೆ, ದೇವಸ್ಥಾನಗಳ ಪೂಜೆ-ಪ್ರಸಾದದ ವ್ಯವಸ್ಥೆಯಲ್ಲಿ ಬದಲಾವಣೆ

ಚಿಕ್ಕಮಗಳೂರು:ಇಂದು ಚಂದ್ರ ಗ್ರಹಣ ಹಿನ್ನೆಲೆ, ಹೊರನಾಡು, ಶೃಂಗೇರಿಯಲ್ಲಿ ಪೂಜೆ-ಪ್ರಸಾದದ ವ್ಯವಸ್ಥೆ ಸ್ವಲ್ಪ ಬದಲಾವಣೆಯಾಗಿದೆ.

ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ 11 ರಿಂದ 12 ಗಂಟೆವರೆಗೆ ಮಾತ್ರ ಪ್ರಸಾದದ ವ್ಯವಸ್ಥೆ
12 ಗಂಟೆ ನಂತರ ಮತ್ತೆ ಪ್ರಸಾದ ಇರುವುದಿಲ್ಲ. ಮಧ್ಯಾಹ್ನ 1.30ಕ್ಕೆ ಅನ್ನಪೂರ್ಣೇಶ್ವರಿ ಗೆ ಮಹಾಮಂಗಳಾರತಿ ಸಂಜೆ 4 ಗಂಟೆವರೆಗೆ ಅರ್ಚನೆ ಮಾಡಲಾಗುವುದು.

ಗ್ರಹಣ ಮೋಕ್ಷ ಕಾಲದ ಬಳಿಕ ಶುದ್ದಿ ಕಾರ್ಯದ ನಂತರವೇ ಪೂಜೆ-ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ ನಡೆಯಲಿದೆ. ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಎಂದಿನಂತೆ ಪೂಜೆ
ಮಧ್ಯಾಹ್ನದ ಊಟ ಇರೋದಿಲ್ಲ.

ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶ ಇರುತ್ತದೆ. ಪೂಜೆ-ಪ್ರಸಾದ ಸೇರಿದಂತೆ ಯಾವುದೇ ಪ್ರಸಾದದ ವ್ಯವಸ್ಥೆ ಇರುವುದಿಲ್ಲ
ದರ್ಶನಕ್ಕೆ ಮಾತ್ರ ಅವಕಾಶ ಇರಲಿದೆ.ಗ್ರಹಣದ ಬಳಿಕ ಪೂಜೆ-ಪ್ರಸಾದ ಎಂದಿನಂತೆ ಇರುತ್ತದೆ.

RELATED ARTICLES

Related Articles

TRENDING ARTICLES