ಬೆಳಗಾವಿ; ಸತೀಶ್ ಜಾರಕಿಹೊಳಿ ಅವರು ಇತ್ತೀಚಿಗೆ ಹೇಳಿದ ಹಿಂದೂ ಪದ ಅಶ್ಲೀಲ ಪದವಾಗಿದೆ. ಹಿಂದೂ ಭಾರತೀಯ ಪದವಲ್ಲ ಇದು ಪರ್ಶಿಯನ್ ಪದ ಹೇಳಿದ್ದನ್ನ ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿಕೊಂಡಿದ್ದಾರೆ.
ಇಂದು ಈ ಹೇಳಿಕೆ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೇ ಓದಿದ್ದಾರೆ. ಹಿಂದು ಶಬ್ದ ಪರ್ಶಿಯನ್ ಶಬ್ದ. ಅದಕ್ಕೆ ದಾಖಲೆ ಇದೆ ವಿಕಿಪೀಡಿಯಾದಲ್ಲಿ ನೋಡಬಹುದು ಅಂತಾ ಹೇಳಿದ್ದೇನೆ ಅಷ್ಟೇ ಎಂದು ತಾವು ಚಿಕ್ಕೋಡಿಯಲ್ಲಿ ಹೇಳಿದ ಹೇಳಿಕೆಯನ್ನ ಸಮರ್ಥನೆ ಮಾಡಿದರು.
ನಾನೇನು ಅರೆ ಬರೆ ಓದಿಕೊಂಡಿಲ್ಲ. ನಾವು ಹಿಂದೂಗೆ ಎಲ್ಲಿ ಅವಮಾನ ಮಾಡಿದ್ದೀವಿ ಸಾಬೀತು ಮಾಡಬೇಕು. ಹಲವು ಬಿಜೆಪಿ ನಾಯಕರೇ ಮಾತನಾಡಿದ್ದಾರೆ ಹಿಂದೂ ಪದ ಪರ್ಷಿಯನ್‌ನಿಂದ ಬಂದಿದ್ದು ಎಂದು. ನನ್ನ ಹೇಳಿಕೆ ಸುರ್ಜೇವಾಲಾ ಖಂಡನೆ ಮಾಡಿದ್ದಾರೆ ಅವರು ನಮಗಿಂತ ಹಿರಿಯರು ಆಕ್ಷೇಪ ಮಾಡಲ್ಲ. ನಾವು ಮಾಡಿದ್ದಾದರೂ ಏನು ನಾವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ ಎಂದು ಸವಾಲ್ ಹಾಕಿದರು.
ಸಿಎಂ ಬೊಮ್ಮಾಯಿಗೆ ಈ ಬಗ್ಗೆ ಚರ್ಚಿಸಲು ಒಂದು ಕಮಿಟಿ ರಚನೆ ಮಾಡಬೇಕು. ಅದರಲ್ಲಿ ಈ ಬಗ್ಗೆ ಪ್ರೂವ್ ಆದ್ರೆ ಕ್ಷಮೆ ಅಲ್ಲ ರಾಜೀನಾಮೆ ಸಹ ನೀಡ್ತೇನೆ. ಯಾರು ಬರೆದಿದ್ದಾರೆ ಅವರ ಮೇಲೆ ಕೇಸ್ ಹಾಕಿ ಫೈಟ್ ಮಾಡಬೇಕು. ಇಂತಹ ವಿಷಯಗಳ ಮೇಲೆ ಹಿಂದುತ್ವ ಗಟ್ಟಿ ಮಾಡೋದು ಅವರ ಉದ್ದೇಶ. ಬೊಮ್ಮಾಯಿಯವರಿಗೆ ಕಮಿಟಿ ರಚಿಸಿ ಒಂದು ತಿಂಗಳಲ್ಲಿ ವರದಿ ನೀಡಿ ಅಂತಾ ಹೇಳಿ ಎಂದ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.
ಪಕ್ಷದ ಬೇರೆ ಇದು ವೈಯಕ್ತಿಕ, ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ ಸತೀಶ್ ಜಾರಕಿಹೊಳಿ ಅರೆ ಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಅರೆ ಬರೆ ಓದಿಕೊಂಡಿಲ್ಲ. ನಾವು ಹಿಂದೂ ಗೆ ಎಲ್ಲಿ ಅವಮಾನ ಮಾಡಿದ್ದೀವಿ ಸಾಬೀತು ಮಾಡಬೇಕು. ಹಲವು ಬಿಜೆಪಿ ನಾಯಕರೇ ಮಾತನಾಡಿದ್ದಾರೆ ಹಿಂದೂ ಪದ ಪರ್ಷಿಯನ್‌ನಿಂದ ಬಂದಿದ್ದು ಎಂದು ಹೇಳಿದ್ದಾರೆ ಎಂದರು.