Thursday, January 23, 2025

ಟಿ-20 ಸಮಿಫೈನಲ್​; ನಾಯಕ ರೋಹಿತ್ ಶರ್ಮಾಗೆ ಗಾಯ.!

ಆಸ್ಟ್ರೇಲಿಯಾ: ನ.10 ರಂದು ಸಮಿಫೈನಲ್​ನಲ್ಲಿ ಭಾರತ ಇಂಗ್ಲೆಂಡ್​ ತಂಡವನ್ನ ಎದುರಿಸಲಿದ್ದು, ಹೀಗಾಗಿ ಇನ್ನು ಎರಡು ದಿನಗಳ ಬಾಕಿ ಹಿನ್ನಲೆಯಲ್ಲಿ ಮಂಗಳವಾರ ಭಾರತ ತಂಡ ಆಟಗಾರ, ನಾಯಕ ರೋಹಿತ್​ ಶರ್ಮಾ ಅವರು ಅಭ್ಯಾಸ ಮಾಡುತ್ತಿದ್ದ ವೇಳೆ ಗಾಯವಾಗಿದೆ ಎಂದು ಹೇಳಲಾಗಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಮುಂಗೈಗೆ ಪ್ರಬಲವಾದ ಪೆಟ್ಟು ಬಿದ್ದಿದ್ದು, ಇಂಗ್ಲೆಂಡ್ ವಿರುದ್ಧದ T-20 ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಭಾರತ ತಂಡಕ್ಕೆ ಭಾರೀ ಭೀತಿ ಎದುರಾಗಿದೆ.

ಅಡಿಲೇಡ್ ಓವಲ್‌ನಲ್ಲಿ ತಂಡದ ಥ್ರೋಡೌನ್ ತಜ್ಞ ಎಸ್ ರಘು ಅವರನ್ನು ಎದುರಿಸುತ್ತಿರುವಾಗ ರೋಹಿತ್ ಸಾಮಾನ್ಯವಾಗಿ ಕ್ರಿಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಶಾರ್ಟ್ ಬಾಲ್ ಲೆಂಗ್ತ್ ಏರಿಯಾದಿಂದ ಜಿಗಿದು ಅವರ ಬಲ ಮುಂಗೈಗೆ ಬಡಿಯಿತು. ಪುಲ್ ಶಾಟ್‌ಗೆ ಯತ್ನಿಸಿ ಚೆಂಡನ್ನು ತಪ್ಪಿಸಿಕೊಂಡ ನಾಯಕ ನೋವಿನಿಂದ ಕೂಡಿದ್ದು, ತಕ್ಷಣವೇ ಸೆಷನ್‌ನಿಂದ ನಿರ್ಗಮಿಸಿದರು.

RELATED ARTICLES

Related Articles

TRENDING ARTICLES