Thursday, January 23, 2025

ವಿದ್ಯಾರ್ಥಿಯನ್ನ ಮದುವೆಯಾಗಲು ತನ್ನ ಲಿಂಗ ಬದಲಿಸಿಕೊಂಡ ಶಿಕ್ಷಕಿ

ರಾಜಸ್ಥಾನ: ರಾಜಸ್ಥಾನದ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಲಿಂಗವನ್ನು ಬದಲಾಯಿಸಿ ಭಾನುವಾರ ತನ್ನ ವಿದ್ಯಾರ್ಥಿಯೊಬ್ಬರನ್ನು ವಿವಾಹವಾದರು.

ಸದ್ಯ ಹುಡುಗ ಅರವ್​ ಆಗಿ ಲಿಂಗ ಬದಲಿಸಿಕೊಂಡಿರುವ ಮೇರಾ, ಈ ಹಿಂದೆ ಭರತ್‌ಪುರದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಮೀರಾ(ಅರವ್​) ಸೇವೆ ಸಲ್ಲಿಸುತ್ತಿದ್ದರು. ಆಗ ಮೇರಾ(ಅರವ್​)ಗೆ ಕಲ್ಪನಾ ಫೌಜ್‌ದಾರ್‌ ಗೆಳೆತನ ಮಾಡಿದ್ದಳು. ನಂತರ ದಿನಗಳಲ್ಲಿ ಗೆಳತನ ಹೋಗಿ ಪರಸ್ಪರ ಪ್ರೀತಿಸತೊಡಗಿದರು.

ಇಬ್ಬರು ಹೆಣ್ಣು ಆಗಿದ್ದರಿಂದ ಮದುವೆಯಾಗಲು ಈಗ ಮೀರಾ ತನ್ನ ಲಿಂಗ ಬದಲಾವಣೆ ಮಾಡಿಕೊಂಡು ಕಲ್ಪನಾಳನ್ನ ಈಗ ಮದುವೆ ಆಗಿದ್ದಾನೆ. ಈ ಬಗ್ಗೆ ಮಾತನಾಡಿ, ನಮ್ಮ ಪ್ರೀತಿಯಲ್ಲಿ ಏಳೇಲು ಜನ್ಮ ಇರಲಿದೆ. ನಮ್ಮಿಬ್ಬರ ಪ್ರತಿಯಲ್ಲಿ ನ್ಯಾಯೋಚಿತವಾಗಿದೆ ಮತ್ತು ಅದಕ್ಕಾಗಿಯೇ ನಾನು ನನ್ನ ಲಿಂಗವನ್ನು ಬದಲಾಯಿಸಿದ್ದೇನೆ ಎಂದು ಈಗ ಆರವ್ ಕುಂತಲ್ ಆಗಿರುವ ಮೀರಾ ಸುದ್ದಿಗಾರರಿಗೆ ತಿಳಿಸಿದರು.

ವಧು ಕಲ್ಪನಾ ಅವರು ಆರವ್ ಅವರನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೂ ಅವರನ್ನು ಮದುವೆಯಾಗುತ್ತಿದ್ದರು ಎಂದು ಹೇಳಿದರು. ನಾನು ಅವನನ್ನು ಮೊದಲಿನಿಂದಲೂ ಪ್ರೀತಿಸುತ್ತಿದ್ದೆ, ಅವನು ಈ ಶಸ್ತ್ರಚಿಕಿತ್ಸೆ ಮಾಡದಿದ್ದರೂ, ನಾನು ಅವನನ್ನು ಮದುವೆಯಾಗುತ್ತಿದ್ದೆ. ನಾನು ಅವನೊಂದಿಗೆ ಶಸ್ತ್ರಚಿಕಿತ್ಸೆಗೆ ಹೋಗಿದ್ದೆ ಎಂದು ಕಲ್ಪನಾ ಹೇಳಿದರು ಎಂದು ಈ ಬಗ್ಗೆ ಎನ್​ಡಿಟಿವಿ ವರದಿ ಮಾಡಿದೆ.

RELATED ARTICLES

Related Articles

TRENDING ARTICLES