ಟ್ರ್ಯಾಕ್ನಲ್ಲಿ ಜೋರಾಗಿ ಓಡ್ತಿದ್ದ ಕುದುರೆಗಳು ಸಹ ಕೊರೋನಾದಿಂದ ಓಟ ನಿಲ್ಲಿಸುವಂತಾಯ್ತು. ಅದು ಸಿನಿಮಾ ಕ್ಷೇತ್ರದಿಂದಲೂ ಹೊರತಾಗಿಲ್ಲ. ಪಡ್ಡೆಹುಲಿಯಿಂದ ತನ್ನ ಎಬಿಲಿಟಿಯನ್ನ ದೊಡ್ಡ ಪರದೆ ಮೇಲೆ ಸಾರಿದ್ದ ಶ್ರೇಯಸ್, ಎರಡನೇ ಹೆಜ್ಜೆ ಇಡೋಕೆ ವರ್ಷಗಳೇ ಬೇಕಾಯ್ತು. ಈಗ ಆ ಟೈಮ್ ಬಂದಾಗಿದೆ. ಅದ್ಯಾವಾಗ ಅನ್ನೋದಕ್ಕೆ ಈ ಸ್ಟೋರಿ ಓದಿ.
- ಮೂರೂವರೆ ವರ್ಷದ ಎಫರ್ಟ್ ತೆರೆಗಪ್ಪಳಿಸೋಕೆ ದಿನಗಣನೆ
- ಶುಕ್ರವಾರದಿಂದ ಬೆಳ್ಳಿತೆರೆ ಮೇಲೆ ಕೆ. ಮಂಜು ಪುತ್ರನ ಘರ್ಜನೆ
- ಭರವಸೆಯ ಸ್ಟಾರ್ ರೇಸ್ನಲ್ಲಿ ಶ್ರೇಯಸ್ ಮಂಜು ಮಿಂಚು..!
ಹೊಸ ನೀರು ಬಂದಾಗಲೇ ಹಳೇ ನೀರು ಶುದ್ಧವಾಗಲು ಸಾಧ್ಯ. ಅದೇ ರೀತಿ ಚಿತ್ರರಂಗಕ್ಕೆ ಹೊಸಬರ ಆಗಮನದಿಂದ ಕಾಂಪಿಟೇಷನ್ ಜೊತೆ ಮಾರುಕಟ್ಟೆ ಕೂಡ ಬೆಳೆಯಲಿದೆ. ಇತ್ತ ಹೊಸ ಕಾನ್ಸೆಪ್ಸ್ಟ್, ಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ. ಸದ್ಯ ಆ ಸಾಲಿನಲ್ಲಿ ಪಡ್ಡೆಹುಲಿ ಮುಖೇನ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ ಶ್ರೇಯಸ್ ಮಂಜು, ಇದೀಗ ಎರಡನೇ ಮಹತ್ವದ ಹೆಜ್ಜೆ ಇಡ್ತಿದ್ದಾರೆ.
ಬದುಕು ಕಟ್ಟಿಕೊಳ್ಳೋಕೆ ಅಂತ ಯುವಕನೊಬ್ಬ ಬೆಂಗಳೂರಿಗೆ ಬಂದಾಗ ಆತನಿಗೆ ಏನೆಲ್ಲಾ ವಿಘ್ನಗಳು ಎದುರಾಗುತ್ವೆ..? ಅವುಗಳನ್ನ ಆತ ಹೇಗೆ ಬಗೆಹರಿಸುತ್ತಾನೆ ಅನ್ನೋದೇ ಚಿತ್ರದ ತಿರುಳು. ಇಲ್ಲಿ ಶ್ರೇಯಸ್ ಎರಡು ಗೆಟಪ್ಗಳಲ್ಲಿ ಮಿಂಚಲಿದ್ದಾರೆ. ಒಂದು ಖಾಕಿ ಖದರ್ ಮತ್ತೊಂದು ಯೂತ್ ಪವರ್. ಯೆಸ್.. ಇದು ಹಾನೆಸ್ಟ್ ಎಫರ್ಟ್ ಹಾಕಿ ಮಾಡಿರೋ ಸಿನಿಮೋತ್ಸಾಹಿ ತಂಡದ ಪ್ರತಿಫಲ ನಿರೀಕ್ಷಿಸೋ ಸಮಯವಾಗಿದೆ.
ಮಲ್ಲಿ ಮಲ್ಲಿ ಅಂತ ಕಿರಿಕ್ ಪಾರ್ಟಿ ಬ್ಯೂಟಿ ಜೊತೆ ಸ್ಟೆಪ್ ಹಾಕಿ ಮಿಂಚಿದ ಶ್ರೇಯಸ್, ಚೊಚ್ಚಲ ಹಾಡಿನಿಂದಲೇ ಸಿನಿಮಾ ಮೇಲಿನ ಭರವಸೆ ಹೆಚ್ಚಿಸಿದ್ರು. ನಂತ್ರ ಬಂದಂತಹ ಟೀಸರ್, ಗಲ್ಲಿಬಾಯ್ ಸಾಂಗ್ಸ್ ಕೂಡ ಸಿನಿಮಾದ ಅಸಲಿಯತ್ತೇನು ಅನ್ನೋದಕ್ಕೆ ಸಾಕ್ಷಿ ಆದವು.
ಉದೋ ಉದೋ ಹುಲಿಗೆಮ್ಮ ಸಾಂಗ್ ಕೂಡ ಶ್ರೇಯಸ್ ಡ್ಯಾನ್ಸ್ ಗಮ್ಮತ್ತಿಗೆ ಕಾರಣವಾಯ್ತು. ಗುಜ್ಜಾಲ್ ಪುರುಷೋತ್ತಮ್ ತಮ್ಮ ಗುಜ್ಜಾಲ್ ಟಾಕೀಸ್ ಬ್ಯಾನರ್ನಡಿ ನಿರ್ಮಿಸಿರೋ ರಾಣ, ಇದೇ ನವೆಂಬರ್ 11ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಌಕ್ಷನ್ ಟ್ರೈಲರ್ನಲ್ಲಿ ಶ್ರೇಯಸ್ ರಿಯಲ್ ಸ್ಟಂಟ್ಸ್ ಸಖತ್ ಮಜಭೂತಾಗಿದ್ದು, ಸಕ್ಸಸ್ಫುಲ್ ಸ್ಟಾರ್ ಡೈರೆಕ್ಟರ್ ನಂದಕಿಶೊರ್ ಸಾರಥ್ಯದಲ್ಲಿ ರಾಣ ರಂಗೇರಲಿದೆ.
ಶ್ರೇಯಸ್ಗಿದು ಮಹತ್ವದ ಸಿನಿಮಾ ಆಗಲಿದ್ದು, ಪ್ರೊಡಕ್ಷನ್ ಕ್ವಾಲಿಟಿ ಕೂಡ ನಿರೀಕ್ಷೆಯ ಮಟ್ಟ ಮೀರಿದೆ. ಖ್ಯಾತ ನಿರ್ಮಾಪಕ ಕೆ ಮಂಜು ತಮ್ಮ ಹೋಮ್ ಬ್ಯಾನರ್ನಲ್ಲಿ ಸಹ ಇಷ್ಟು ರಿಚ್ ಆಗಿ ಸಿನಿಮಾ ಮಾಡಲಾರರೇನೋ ಅನ್ನುವಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದೆ. ಇನ್ನು ರೀಷ್ಮಾ ನಾಣಯ್ಯ ಗ್ಲಾಮರ್ ಈ ಸಿನಿಮಾಗೆ ಪ್ಲಸ್ ಆಗಲಿದ್ದು, ಱಪರ್ ಚಂದನ್ ಶೆಟ್ಟಿ ಮ್ಯೂಸಿಕ್, ಸಿನಿಮಾಟೋಗ್ರಫಿ ಸೇರಿದಂತೆ ಟೆಕ್ನಿಕಲಿ ಇಂಪ್ರೆಸ್ಸೀವ್ ಆಗಿದೆ ರಾಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯುರೋ ಹೆಡ್, ಪವರ್ ಟಿವಿ