Thursday, October 31, 2024

ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದ ಪ್ರಮೋದ್ ಮುತಾಲಿಕ್ ಹೇಳಿಕೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನಿಡಿದ್ದು, ಬಿಜೆಪಿ ಹಿಂದುತ್ವ ಪರ ಕೆಲಸ ಮಾಡುತ್ತಿಲ್ಲ.ಹಾಗಂತ ನನ್ನಂಥವರಿಗೆ ಯೋಚನೆ ಬಂದಿದೆ. ಆದರೆ ನಾನು ಬಿಜೆಪಿ ಮನೆ ಬಾಗಿಲಿಗೆ ಹೋಗುವುದಿಲ್ಲ. ಈಗಾಗಲೇ ಸಾಕಷ್ಟು ಸಾರಿ ಕೇಳಿ, ಬೇಡಿ ಎಲ್ಲವೂ ಆಗಿದೆ. ಸ್ವತಂತ್ರವಾಗಿ ನಿಂತು ಗೆದ್ದು ತೋರಿಸುತ್ತೇನೆ. ಸ್ಪರ್ಧೆ ಯಾರದ್ದೋ ಲಾಭಕ್ಕೋಸ್ಕರವಲ್ಲ. ಗೆಲ್ಲುವುದೋಸ್ಕರ ಸ್ಪರ್ಧೆ ಮಾಡ್ತೀನಿ.

ಸಾವಿರಾರು ಕಾರ್ಯಕರ್ತರ ಇಚ್ಛೆಗೋಸ್ಕರ ಸ್ಪರ್ಧಿಸಿ ಗೆದ್ದೇ ಗೆಲ್ಲುತ್ತೇನೆ. ಯಾವುದಾದರೂ ಕ್ಷೇತ್ರ ನಿಶ್ಚಯ ಮಾಡ್ತೀನಿ.
ಹಿಂದುಗಳಿಗೆ, ಹಿಂದು ಕಾರ್ಯಕರ್ತರಿಗೆ, ಹಿಂದು ಸಂಘಟನೆಗಳ ಗೌರವಕ್ಕೋಸ್ಕರ ಸ್ಪರ್ಧೆ ಮಾಡುತ್ತೇನೆ. 25 ಹಿಂದು ಕಾರ್ಯಕರ್ತರಿಗೆ ಟಿಕೆಟ್ ನೀಡಲು ಕೇಳಲಾಗಿತ್ತು. ಆದರೆ ಬಿಜೆಪಿಯಿಂದ ಸ್ಪಂದನೆಯಿಲ್ಲ. ಹೀಗಾಗಿ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಈ ಪೈಕಿ 5 ಕ್ಷೇತ್ರಗಳಲ್ಲಿ ಸ್ವಾಮೀಜಿಗಳು ಸ್ಪರ್ಧಿಸಲಿದ್ದಾರೆ. ನಮಗೆ ಲಾಭ ಹಾನಿ ಮುಖ್ಯವಲ್ಲ.ಹಿಂದುಗಳ, ಕಾರ್ಯಕರ್ತರ ಕಷ್ಟ ಸುಖ ಮುಖ್ಯ.
ಯಾರದ್ದೋ ಲಾಭ ನಷ್ಟ ಅವರು ವಿಚಾರ ಮಾಡಲಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES