Monday, December 23, 2024

‘ಮಾಸ್ಟರ್ ​ಶೆಫ್’ ಆಗಿದ್ಯಾಕೆ ಬಾಹುಬಲಿ ಬ್ಯೂಟಿ ಅನುಷ್ಕಾ..?

ಬಾಹುಬಲಿ ನಂತ್ರ ನಿಶ್ಯಬ್ಧವಾಗಿದ್ದ ದೇವಸೇನಾ ಅನುಷ್ಕಾ, ಇದೀಗ ಹೊಸ ಕಾಯಕಕ್ಕೆ ಕೈ ಹಾಕಿದ್ದಾರೆ. ಸ್ಲಿಮ್ ಆಗೋದ್ರ ಜೊತೆ ಮಾಸ್ಟರ್ ಶೆಫ್ ಆಗಿ ಕಾಣಸಿಕ್ಕಿದ್ದಾರೆ. ಅರೇ ಮದ್ವೆ ಆಗಿ ಪರ್ಮನೆಂಟ್ ಆಗಿ ಅಡುಗೆಮನೆ ಸೇರಿಬಿಟ್ರಾ ಕರಾವಳಿ ಸ್ವೀಟಿ ಅಂತ ಹುಬ್ಬೇರಿಸೋಕೂ ಮುನ್ನ ಈ ಸ್ಟೋರಿ ಒಮ್ಮೆ ಕಣ್ತುಂಬಿಕೊಳ್ಳಿ.

  • ಪ್ರಭಾಸ್ ಕೈ ಹಿಡಿದು ಹೊಸ ಬಾಳಿಗೆ ಕಾಲಿಡ್ತಾರಾ ದೇವಸೇನಾ..?

ಬಾಹುಬಲಿ ಹಿಟ್ ಆಗಿದ್ದೇ ಆಗಿದ್ದು, ಅದ್ಯಾಕೋ ದೇವಸೇನಾ ಅನುಷ್ಕಾ ಸಿನಿಯಾನದಲ್ಲಿ ಬಿರುಗಾಳಿ ಎದ್ದುಬಿಡ್ತು. ಯಾವ ಸಿನಿಮಾಗೆ ಕೈ ಹಾಕಿದ್ರು ಸಹ ನಿರೀಕ್ಷಿತ ಗೆಲುವು ಸಿಗಲೇ ಇಲ್ಲ. ಬಾಹುಬಲಿ 2 ಬಳಿಕ ಭಾಗಮತಿ ಮಾಡಿದ್ರು. ಅದಾದ್ಮೇಲೆ ಒಂದು ಸಣ್ಣ ಗ್ಯಾಪ್ ತೆಗೆದುಕೊಂಡು ನಿಶ್ಯಬ್ಧಂ ಅನ್ನೋ ಚಿತ್ರ ಮಾಡಿದ್ರು. ಎಲ್ಲವೂ ಮಹಿಳಾ ಪ್ರಧಾನ ಚಿತ್ರಗಳೇ ಆಗಿದ್ದು, ಬೇರೆ ಹೀರೋಗಳ ಜೊತೆ ಆಕೆಗೆ ವೇವ್​ಲೆಂಥ್ ಮ್ಯಾಚ್ ಆಗಲೇ ಇಲ್ಲ.

ಇದೀಗ ಮಾಸ್ಟರ್​ ಶೆಫ್ ಆಗಲು ತಯಾರಿ ನಡೆಸಿರೋ ಅನುಷ್ಕಾ, ಅದು ಸಿನಿಮಾಗಾಗಿ ಅನ್ನೋದನ್ನ ಬರ್ತ್ ಡೇ ವಿಶೇಷ ತಮ್ಮ ಹೊಸ ವರಸೆಯನ್ನ ಅವ್ರೇ ಇಂಟ್ರಡ್ಯೂಸ್ ಮಾಡಿದ್ದಾರೆ. ಅಡುಗೆಮನೆಯಲ್ಲಿ ಪ್ಯಾನ್ ಹಿಡಿದು, ಶೆಫ್ ಅನ್ವಿತಾ ಶೆಟ್ಟಿ ರೋಲ್​ನಲ್ಲಿ ಕಾಣಸಿಗುತ್ತೇನೆ ಅಂತ ಫಸ್ಟ್ ಲುಕ್ ಪೋಸ್ಟರ್ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಒಟ್ಟಾರೆ ಈ ಸಿನಿಮಾದ ಮಧ್ಯೆ ಪ್ರಭಾಸ್ ಕೈ ಹಿಡಿಯೋ ಮೂಲಕ ಅಂತೆ ಕಂತೆಗಳಿಗೆ ಅಂತ್ಯ ಹಾಡ್ತಾರಾ ನಮ್ಮ ಕರಾವಳಿ ಸ್ವೀಟಿ ಅನುಷ್ಕಾ ಅನ್ನೋದು ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯುರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES