Wednesday, January 22, 2025

ಕೆಜಿಎಫ್​-2 ಹಾಡು ಬಳಕೆ; ಕರ್ನಾಟಕ ಕಾಂಗ್ರೆಸ್​ ಹೈಕೋರ್ಟ್​ಗೆ ರೀಟ್​ ಅರ್ಜಿ ಸಲ್ಲಿಕೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಹಾಗೂ ಭಾರತ ಐಕ್ಯತಾ ಯಾತ್ರೆಯಲ್ಲಿ ಕೆಜಿಎಫ್​-2 ಹಾಡು ಬಳಕೆ ಮಾಡಲಾಗಿದ್ದು, ಕಾಂಗ್ರೆಸ್​ ಖಾತೆ ಬ್ಲಾಕ್​ ಮಾಡಬೇಕೆಂದು ಬೆಂಗಳೂರಿನ ಕೆಳ ನ್ಯಾಯಾಲಯ ಆದೇಶ ಬೆನ್ನಲೆಯಲ್ಲಿ ಇಂದು ರಾಜ್ಯ ಕಾಂಗ್ರೆಸ್​ ಹೈಕೋರ್ಟ್​ ಮೆಟ್ಟಿಲೇರಿ ರೀಟ್​ ಅರ್ಜಿ ಸಲ್ಲಿಕೆ ಮಾಡಿದೆ.

ಕಾಂಗ್ರೆಸ್‌ ಹಾಗೂ ಭಾರತ ಐಕ್ಯತಾ ಯಾತ್ರೆಯಲ್ಲಿ ನಟ ಯಶ್​ ನಟನೆಯ ಹಿಂದಿ ಭಾಷೆಯ ಕೆಜಿಎಫ್​​-2 ಹಾಡುಗಳನ್ನ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘನೆಯನ್ನ ಮಾಡಿದೆ ಎಂದು ಕೆಜಿಎಫ್​ ಹಾಡು ಖರೀದಿ ಮಾಡಿದ ಎಂಆರ್​ಟಿ ಮ್ಯೂಸಿಕ್​​ ನ್ಯಾಯಾಲಯ ಮೊರೆ ಹೋಗಿತ್ತು.

ಇದಕ್ಕೆ ನಿನ್ನೆ ಬೆಂಗಳೂರಿನ ಕೆಳ ನ್ಯಾಯಾಲಯ ಕೇಸ್​ ನಡೆಸಿ ಕೃತಿಸ್ವಾಮ್ಯ ಉಲ್ಲಂಘನೆಯಾಗಿದೆ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಸಾಮಾಜಿಕ ಜಾಲತಾಣಗಳನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಟ್ವಿಟರ್‌ಗೆ ತಾಖೀತು ಮಾಡಿತ್ತು.

ಇದೆಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ  ಇಂದು ಕಾಂಗ್ರೆಸ್​ ಹೈಕೋರ್ಟ್​ ಮೆಟ್ಟಿಲೆರಿದೆ. ಕೆಜಿಎಫ್​ 2 ಚಿತ್ರದ ಧ್ವನಿಮುದ್ರಿಕೆಗಳನ್ನು ಬಳಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

ಕೆಜಿಎಫ್ ಅಧ್ಯಾಯ-2 ಚಿತ್ರದ ಧ್ವನಿಮುದ್ರಿಕೆಗಳನ್ನು ಬಳಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕರ್ನಾಟಕ ಕಾಂಗ್ರೆಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

RELATED ARTICLES

Related Articles

TRENDING ARTICLES