Sunday, December 22, 2024

ಸಾಧಕರಿಗೆ ಕೆಂಪೇಗೌಡರ ಪ್ರಶಸ್ತಿ ನೀಡಲು ಸಿದ್ಧತೆ

ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಇದ್ರಿಂದ ಈ ಬಾರಿಯಾದ್ರೂ ಕೆಂಪೇಗೌಡರ ಜಯಂತಿ ಆಚರಿಸಬೇಕು ಅಂತ ಬಿಬಿಎಂಪಿ ನೌಕರರ ಸಂಘ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಇದ್ರಿಂದ ಮಾಚ್೯ನಲ್ಲಿ ಕೆಂಪೇಗೌಡರ ಜಯಂತಿಗೆ ಹಲವು ಸಮಿತಿಗಳನ್ನು ರಚಿಸಿತ್ತು. ಅದ್ರಲ್ಲೂ ಸ್ವಾಗತ ಸಮಿತಿ, ಜಯಂತ್ಯೋತ್ಸವ ಸಮಿತಿ, ಸಾಧಕರಿಗೆ ಪ್ರಶಸ್ತಿ ಆಯ್ಕೆ ಮಾಡುವ ಸಮಿತಿ, ಹಣಕಾಸು ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಲಾಗಿತ್ತು.

ಆದ್ರೆ, ಪ್ರತಿ ವರ್ಷ ಕೆಂಪೇಗೌಡರ ಜಯಂತ್ಯೋತ್ಸವಕ್ಕೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ನಾಡಪ್ರಭು ಕೆಂಪೇಗೌಡರ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿತ್ತು. ಅದೇ ರೀತಿ ಕಳೆದ ವರ್ಷ ಕೇವಲ 31 ಜನ ಸಾಧಕರಿಗೆ ಪ್ರಶಸ್ತಿ ನೀಡಿತ್ತು. ಇದ್ರಿಂದ ಈ ಬಾರಿಯೂ 31 ಪ್ರಶಸ್ತಿಯನ್ನು ನೀಡಬೇಕು ಅಂತ ಒತ್ತಡವಿದ್ರೆ, ಮತ್ತೊಂದು ಕಡೆ ವಿಧಾನಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಹತ್ತಿರ ಇರೋದ್ರಿಂದ ಪ್ರಶಸ್ತಿಗಳ ಸಂಖ್ಯೆ ಹೆಚ್ಚಿಸಿ ಅನ್ನೋ ಒತ್ತಡ ಬರುತ್ತಿದೆಯಂತೆ.

ಈ ತಿಂಗಳ ಒಳಗೆ ಕೆಂಪೇಗೌಡ ಜಯಂತಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.ಎಲ್ಲಿ ಮಾಡಬೇಕು ಅಂತ ಸಮಿತಿಗಳು ನಿರ್ಧಾರ ಮಾಡಿ ತಿಳಿಸುತ್ತಾರೆ.ಪ್ರಶಸ್ತಿ ನೀಡಲು ಆಹ್ವಾನ ಮಾಡುತ್ತೇವೆ. ಪ್ರಶಸ್ತಿಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನ ಮಾಡಲಾಗುತ್ತದೆ. ಎಷ್ಟು ಸಂಖ್ಯೆಯಲ್ಲಿ ಪ್ರಶಸ್ತಿ ನೀಡಬೇಕು ಎಂಬುದರ ಬಗ್ಗೆಯೂ ತೀರ್ಮಾನ ಆಗಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 31ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಚರ್ಚೆ ನಡೆದಿದೆ. ಪ್ರಶಸ್ತಿಗಳ ಸಂಖ್ಯೆ ಹೆಚ್ಚಾಗಬಹುದು ಅಂತಾ BBMP ಆಯುಕ್ತರು ತಿಳಿಸಿದ್ದಾರೆ.

ಸದ್ಯ ಇಷ್ಟೂ ದಿನ ಸುಮ್ಮನಿದ್ದ ಸರ್ಕಾರ ಹಾಗೂ ಬಿಬಿಎಂಪಿಗೆ ಈಗ ಇದ್ದಕ್ಕಿದ್ದಂತೆ ಕೆಂಪೇಗೌಡರ ಜಯಂತಿ ನೆನಪಾಗುತ್ತಿದೆ. ಅದರ ಜೊತೆಗೆ ಬೆಂಗಳೂರಿನ ಎಲ್ಲಾ ಶಾಕಕರಿಗೂ ಕೂಡ ಈಗ ನಾಡಪ್ರಭುಗಳ ಅದ್ದೂರಿ ಜಯಂತ್ಯೋತ್ಸವ ಹಾಗೂ ಪ್ರಶಸ್ತಿ ನೀಡಲೇಬೇಕಾದ ಅನಿರ್ವಾರ್ಯತೆ ಬಂದಿದೆ. ಆದ್ರೆ, ನಾಡಪ್ರಭುಗಳ ಹೆಸರಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡ್ತಿರುವ ರಾಜಕಾರಣಿಗಳಿಗೆ ಏನು ಹೇಳಬೇಕೋ ನೀವೇ ನಿರ್ಧಾರ ಮಾಡಿ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES