Wednesday, January 22, 2025

ವಿಶ್ವಕಪ್​ ಫೈನಲ್​ಗೆ ಲಗ್ಗೆವಿಟ್ಟು ಭಾರತ ಟ್ರೋಫಿ​ ಗೆಲ್ಲಲಿದೆ; ಎಬಿಡಿ ವಿಲಿಯರ್ಸ್​​ ವಿಶ್ವಾಸ

ನವದೆಹಲಿ: ರಾಯಲ್​ ಚಾಲೇಂಜರ್ಸ್​​ ಬೆಂಗಳೂರು(ಆರ್​​ಸಿಬಿ) ಮಾಜಿ ಆಟಗಾರ, ಕ್ರಿಡಾಂಗಣದಲ್ಲಿ 360 ಡಿಗ್ರಿ ಬ್ಯಾಟ್​ ಬೀಸುವ ಎಬಿಡಿ ವಿಲಿಯರ್ಸ್​ ಅವರು ಭಾರತಕ್ಕೆ ಬಂದಿದ್ದು, ದೇಶದ ಹಲವು ನಗರಗಳ ಕ್ರಿಡಾಂಗಣಕ್ಕೆ ಭೇಟಿ ನೀಡುವುದಲ್ಲದೇ, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಅದರಂತೆ ಇಂದು ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ ಫೈನಲ್​ ಹೋಗುವ ತಂಡವನ್ನ ಹಾಗೂ ಈ​ ಪಂದ್ಯದಲ್ಲಿ ಗೆಲ್ಲುವ ತಂಡವನ್ನ ಎಬಿಡಿ ವಿಲಿಯರ್ಸ್ ಗುರುತಿಸಿದ್ದಾರೆ.

ಟಿ-20 ಸಮಿಫೈನಲ್​ನಲ್ಲಿ ಭಾರತ ಗೆಲುವು ಸಾಧಿಸಿ, ಭಾರತ, ನ್ಯೂಜಿಲೆಂಡ್​​ ನಡುವೆ ಫೈನಲ್​ ಪಂದ್ಯ ನಡೆಯುತ್ತದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ ಜಯಗಳಿಸುತ್ತದೆ. ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದು ಭಾವಿಸುತ್ತೇನೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್​ ಟಿ-20 ಪಂದ್ಯಗಳಲ್ಲಿ ಬ್ಯಾಟ್ಸಮನ್​ ಸೂರ್ಯಕುಮಾರ್, ವಿರಾಟ್​ ಕೊಹ್ಲಿ ಉತ್ತಮ ಫಾರ್ಮನಲ್ಲಿದ್ದಾರೆ. ಇಡೀ ಭಾರತ ತಂಡ ಅತ್ಯಂತ ಪ್ರತಿಭಾವಂತರಿಂದ ಕೂಡಿದೆ ಎಂದು ಹಾಡಿಹೊಗಳಿದರು.

ಇನ್ನು ಇದೇ ನವೆಂಬರ್​ 9 ರಂದು ಪಾಕಿಸ್ತಾನ ತಂಡ ನ್ಯೂಜಿಲೆಂಡ್​ ತಂಡವನ್ನ ಆಸ್ಟ್ರೇಲಿಯಾ ಸಿಡ್ನಿಯಲ್ಲಿ ಎದುರಿಸಲಿದೆ. ಮರುದಿನ ಅಂದರೆ ನವೆಂಬರ್​ 10(ಗುರುವಾರ) ಕ್ಕೆ ಭಾರತವು ಇಂಗ್ಲೆಂಡ್​ ತಂಡವನ್ನ ಆಸ್ಟ್ರೇಲಿಯಾದ ಅಡಿಲೇಡ್​ ಕ್ರಿಡಾಂಗಣದಲ್ಲಿ ಎದುರಿಸಲಿದೆ. ಎರಡು ಪಂದ್ಯದಲ್ಲಿ ಜಯಗಳಿಸಿದ ತಂಡ ಫೈನಲ್​ಗೆ ಲಗ್ಗೆ ಹಿಡಲಿದೆ.

RELATED ARTICLES

Related Articles

TRENDING ARTICLES