Sunday, December 22, 2024

ಹೊಸ ಮನೆಗೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿ

ಬೆಂಗಳೂರು: ಸ್ಯಾಂಡಲ್​ವುಡ್​ನ ಕ್ಲಾಸ್​ ಜೋಡಿ ಎಂದೇ ಕರೆಯುವ ನಟಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಅವರು ಇಂದು ಹೊಸ ಮನೆ ಖರೀದಿ ಮಾಡಿದ್ದಾರೆ.

ನೂತನ ಮನೆಯಲ್ಲಿ ಇತ್ತೀಚಿಗಷ್ಟೇ ಹಾಲು ಉಕ್ಕಿಸುವ ಮೂಲಕ ಗೃಹ ಪ್ರವೇಶ ಮಾಡಿ ಈ ದಂಪತಿ ಕಾಲಿಟ್ಟಿದ್ದಾರೆ. ಹೊಸ ಮನೆಯ ಕೆಲ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ನಟಿ ಮಿಲನಾ ನಾಗರಾಜ್‌ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿಸಿದ ಮಿಲನಾ ನಾಗರಾಜ್​, ಇದು ನಮ್ಮ ಹೊಸ ಗೂಡು ಎಂಬ ಶಿರ್ಷಿಕೆ ನೀಡಿದ್ದಾರೆ. ಇದಕ್ಕೆ ಸಿನಿಮಾ ಸ್ನೇಹಿತರು ಮತ್ತು ಅಭಿಮಾನಿಗಳು ಶುಭ ಹಾರೈಸಿ ಈ ದಂಪತಿಗಳು ಹೀಗೆ ನಗು ನಗುತ್ತಾ ಸುಖವಾಗಿ ಬಾಳಲಿ ಎಂದು ಹಾರೈಸಿದ್ದಾರೆ.

ಜಾನ್ ಜಾನಿ ಜನಾರ್ಧನ್ ಸಿನಿಮಾದಲ್ಲಿ ನಟಿನೆ ಮಾಡಿದ್ದ ಈ ದಂಪತಿ, ಅಲ್ಲಿಂದ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದರು. ಮಿಲನಾ ಮತ್ತು ಡಾರ್ಲಿಂಗ್​ ಕೃಷ್ಣ. ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಯಶಸ್ಸು ಕಂಡಿದ್ದಾರೆ.

RELATED ARTICLES

Related Articles

TRENDING ARTICLES