Monday, December 23, 2024

ರಾಹುಗ್ರಸ್ಥ ಚಂದ್ರಗ್ರಹಣದಿಂದ ಅ‘ಮಂಗಳ’ನಾ..?

ಒಂದೇ ಮಾಸದಲ್ಲಿ ಎರಡೆರಡು ಗ್ರಹಣ ಗೋಚರವಾಗಿದೆ. ಸೂರ್ಯ ಗ್ರಹಣ ಬೆನ್ನಲ್ಲೇ ಚಂದ್ರಗ್ರಹಣ ಗೋಚರವಾಯಿತು. ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರಗ್ರಹಣ ಆರಂಭವಾಗಿ ಸಂಜೆ 4 ಗಂಟೆ 28 ನಿಮಿಷಕ್ಕೆ ಗ್ರಹಣ ಮಧ್ಯಕಾಲ ತಲುಪಿ, ಸಂಜೆ 6 ಗಂಟೆ 17 ನಿಮಿಷಕ್ಕೆ ಮೋಕ್ಷಕಾಲ ತಲುಪಿತು. ವರ್ಷದ ಕೊನೆಯ ಗ್ರಹಣ ಇದಾಗಿದ್ದು, ನಭೋ ಮಂಡಲದಲ್ಲಿ ನೆರಳು ಬೆಳಕಿನಾಟ ಕಂಡು ಜನ ವಿಸ್ಮಿತರಾದರು. ಚಂದ್ರೋದಯಕ್ಕೂ ಮೊದಲೇ ಗ್ರಹಣ ಗೋಚರಿಸಿದ ಹಿನ್ನೆಲೆಯಲ್ಲಿ ಇದನ್ನು ರಾಹುಗ್ರಸ್ಥ ಚಂದ್ರಗ್ರಹಣ ಎಂದು ಕರೆಯಲಾಗುತ್ತಿದೆ.

ರಕ್ತಚಂದ್ರಗ್ರಹಣದಿಂದ ಜಲಕಂಟಕ ಸಾಧ್ಯತೆಗಳಿದ್ದು, ವಿಶ್ವಾದ್ಯಂತ ಚಂಡಮಾರುತ, ಜಲಪ್ರಳಯ ಸಂಭವವಿದೆ ಎಂದು ಹೇಳಲಾಗುತ್ತಿದೆ. ಮಂಗಳವಾರ ಗ್ರಹಣ ಗೋಚರಿಸಬಾರದಾ..? ಈ ರಕ್ತ ಚಂದ್ರಗ್ರಹಣದಿಂದಾಗಿ ಅಪಘಾತಗಳು ಹೆಚ್ಚಾಗುತ್ತವಾ..? ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವಾ..? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇನ್ನು ಗ್ರಹಣದಿಂದಾಗಿ ಬೆಂಗಳೂರಿನ ಬಸವನಗುಡಿಯ ದೊಡ್ಡಗಣಪತಿ, ಗವಿಗಂಗಾಧರೇಶ್ವರ, ಕಾಡುಮಲ್ಲೇಶ್ವರ, ಗಂಗಮ್ಮ, ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನಗಳು, ಶ್ರೀ ಶಿರಸಿ ಮಾರಿಕಾಂಬಾ ದೇವಿ, ​ತುಮಕೂರಿನ ದೇವರಾಯನದುರ್ಗ, ಲಕ್ಷ್ಮೀನರಸಿಂಹಸ್ವಾಮಿ, ಚಾಮುಂಡೇಶ್ವರಿ ದೇಗುಲ, ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲ ಸೇರಿ ವಿವಿಧ ದೇಗುಲಗಳನ್ನು ಬಂದ್ ಮಾಡಲಾಗಿತ್ತು. ಗ್ರಹಣದ ಮೋಕ್ಷಕಾಲದ ಬಳಿಕ ಸ್ವಚ್ಛತಾ ಕಾರ್ಯ ಭರದಿಂದ ಸಾಗಿತು. ಬಳಿಕ ವಿವಿಧೆಡೆ ವಿಶೇಷ ಪೂಜೆಪುನಸ್ಕಾರಗಳನ್ನು ನೆರವೇರಿಸಲಾಯಿತು.

RELATED ARTICLES

Related Articles

TRENDING ARTICLES