Monday, December 23, 2024

ಕೆಂಪೇಗೌಡ ಜಯಂತಿಯನ್ನು ಸಂಭ್ರದಿಂದ ಮಾಡಲು ನಿರ್ಧರಿಸಿದ ಬಿಬಿಎಂಪಿ..!

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದ್ದು, ಬಿಬಿಎಂಪಿ ವತಿಯಿಂದ ಕೆಂಪೇಗೌಡ ಜಯಂತಿ ಮಾಡುವ ವಿಚಾರವಾಗಿ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷದಿಂದ ಕೆಂಪೆಗೌಡ ಜಯಂತಿ ಮಾಡಿಲ್ಲ, ಈ ವರ್ಷ ಸಂಭ್ರಮದಿಂದ ಮಾಡುತ್ತೇವೆ.ಕೆಂಪೆಗೌಡ ಜಯಂತಿ ಬಗ್ಗೆ ನೌಕರರ ಸಂಘ ಬೇಡಿಕೆ ಇಟ್ಟಿದ್ದಾರೆ. ಈ ತಿಂಗಳ ಒಳಗೆ ಕೆಂಪೇಗೌಡ ಜಯಂತಿ ಮಾಡಲು ಸಿದ್ಧತೆ ನಡೆಸಲಾಗುತ್ತದೆ. ಎಲ್ಲಿ ಮಾಡಬೇಕು ಅಂತ ಸಮಿತಿಗಳ ನಿರ್ಧಾರ ಮಾಡಿ ತಿಳಿಸುತ್ತಾರೆ.

ಪ್ರಶಸ್ತಿ ನೀಡಲು ನೊಟಿಫಿಕೇಶನ್ ಆಹ್ವಾನ ಮಾಡುತ್ತೇವೆ. ಪ್ರಶಸ್ತಿಗೆ ಬಂದಿರುವಮತಹ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನ ಮಾಡಲಾಗುತ್ತೆ. ಪ್ರಶಸ್ತಿ ವಿಚಾರವಾಗಿ ಮಾರ್ಚ್‌ನಲ್ಲಿ ಸಭೆಯಾಗಿದೆ. ಎಷ್ಟು ಸಂಖ್ಯೆಯಲ್ಲಿ ಪ್ರಶಸ್ತಿ ನೀಡಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 31 ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಚರ್ಚೆ ನಡೆದಿದೆ,
ಪ್ರಶಸ್ತಿಗಳ ಸಂಖ್ಯೆ ಹಾಗೂ ಹೆಚ್ಚಾಗ ಬಹುದು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES