Tuesday, December 24, 2024

ಒಂದೇ ಹುದ್ದೆಗೆ ‌ಇಬ್ಬರು ಕೆಎಎಸ್‌ ಅಧಿಕಾರಿಗಳ ಹಗ್ಗಜಗ್ಗಾಟ..!

ಬೆಂಗಳೂರು : ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಅಭಿವೃದ್ಧಿಗಿಂತ ಅಧಿಕಾರಿಗಳೇ ತಿಂದು ತೇಗಿದ್ದು ಹೆಚ್ಚು. ಒಂದೊಂದು ಹುದ್ದೆಗೂ ಕೋಟಿ ಕೋಟಿ ಬೆಲೆ ಬಾಳುವಷ್ಟು ಡಿಮ್ಯಾಂಡ್ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಇದೆ. ಅಧಿಕಾರಕ್ಕಾಗಿ ಎಂಥಾ ಲಾಬಿಯಾದ್ರು ಮಾಡ್ತಾರೆ. ಯೆಸ್ಅಂಬೇಡ್ಕರ್ ಅಭಿವೃದ್ಧಿ ಪ್ರಾಧಿಕಾರದಲ್ಲೂ ಕೂಡಾ ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಜಂಗೀಕುಸ್ತಿ ನಡೆಸುತ್ತಿದ್ದಾರೆ. ಚೇರ್‌ಗಾಗಿ ನಾ ಮುಂದು ತಾ ಮುಂದು ಅಂತಾ ವಾರದಿಂದ ಜಟಾಪಟಿ ನಡೆಸಿ ಈಗಾಗಲೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಪ್ರಾಧಿಕಾರದ ಮಾನ ಮೂರು ಕಾಸಿಗೆ ಹರಾಜು ಹಾಕ್ತಿದ್ದಾರೆ.

ಅಂಬೇಡ್ಕರ್ ಅಭಿವೃದ್ಧಿ ಪ್ರಾಧಿಕಾರದ ಎಂ.ಡಿ. ಕೆ.ಎಂ ಸುರೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಅಕ್ಟೋಬರ್-29 ರಂದೇ ವರ್ಗಾವಣೆ ಮಾಡಿದರೂ ಕುರ್ಚಿ ಬಿಟ್ಟು ಕೊಡಲು ನಿರಾಕರಿಸುತ್ತಿದ್ದಾರೆ‌.ಹೀಗಾಗಿ ಆ ಹುದ್ದೆಗೆ ವರ್ಗಾವಣೆಗೊಂಡಿರುವ ಕೆ‌ಎನ್ ಸುರೇಶ್ ನಾಯ್ಕ್ ಪರದಾಡುತ್ತಿದ್ದು, ಇಬ್ಬರ ಮಧ್ಯೆ ಕುರ್ಚಿಗಾಗಿ ಗುದ್ದಾಟ ನಡೆಯುತ್ತಿದೆ‌‌.ಈಗಾಗಲೇ ವರ್ಗಾವಣೆಗೊಂಡುರುವ ಸುರೇಶ್ ಕುಮಾರ್ ಮೇಲೆ ಬೋರ್ ವೆಲ್ ಅಕ್ರಮ ಆರೋಪ ಇದೆ.ಈ ಸಂಬಂಧ ತನಿಖೆ ಆದೇಶಿಸಿ ಸುರೇಶ್ ಕುಮಾರ್‌ನ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ‌.ವರ್ಗಾವಣೆ ಆದೇಶ ಸರಿಯಿಲ್ಲ ಅಂತ ಸುರೇಶ್ ಕುಮಾರ್, ಸುರೇಶ್ ನಾಯ್ಕ್ ಕೆಲಸಕ್ಕೆ ಅಡ್ಡಿ ಮಾಡ್ತಿದ್ದಾರೆ‌.

ಇಬ್ಬರು ಅಧಿಕಾರಿಗಳ ಗುದ್ದಾಟದಿಂದ ಅಭಿವೃದ್ಧಿ ನಿಗಮದಲ್ಲಿ ಒಂದು ವಾರದಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ನಿತ್ಯ ರಾಜ್ಯದ ಪಲಾನುಭವಿಗಳು ಬೆಂಗಳೂರಿನ ಅಂಬೇಡ್ಕರ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಗಮಿಸಿ ಕೆಲಸ ಆಗದೆ ವಾಪಸ್ ಆಗ್ತಿದ್ದಾರೆ.ಕೂಡಲೇ ಸರ್ಕಾರ ಅಧಿಕಾರಿಗಳ ಕುರ್ಚಿ ಗುದ್ದಾಟಕ್ಕೆ ಬ್ರೇಕ್ ಹಾಕಬೇಕೆಂದು ಒತ್ತಾಯ ಮಾಡ್ತಿದ್ದಾರೆ.

ಒಟ್ನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಚೆನ್ನಾಗಿ ದುಡ್ಡು ಮಾಡಬೇಕು ಅಂತ ಅಧಿಕಾರಿಗಳು ಕುರ್ಚಿಗಾಗಿ ಬಡಿದಾಡುಕೊಳ್ಳುತ್ತಿದ್ದು, ಇಂತಹ ಅಧಿಕಾರಿಗಳ ಈಗಾಗಲೇ ‌ಕುಲಗೆಟ್ಟು ಹೋಗಿರುವ ಪ್ರಾಧಿಕಾರಕ್ಕೆ ಇನ್ನಷ್ಟು ಮಸಿ ಬಳಿಯುವ ಕೆಲಸವನ್ನು ಮಾಡ್ತಾ ಇರುವುದು ವಿಪರ್ಯಾಸವೆ ಸರಿ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES