Thursday, January 23, 2025

25ನೇ ಬೆಂಗಳೂರು ಟೆಕ್ ಶೃಂಗಸಭೆ; ಬರೋಬ್ಬರಿ 20 ದೇಶಗಳು ಭಾಗಿ

ಬೆಂಗಳೂರು:ನವೆಂಬರ್ 16 ರಿಂದ 18 ವರೆಗೆ 25ನೇ ಬೆಂಗಳೂರು ಟೆಕ್ ಶೃಂಗಸಭೆ ನಡೆಯಲಿದೆ. ಬರೋಬ್ಬರಿ 20 ದೇಶಗಳ 350 ಡೊಮೇನ್ ತಜ್ಞರು, 70ಕ್ಕೂ ಅಧಿಕ ಸೆಷನ್ ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

575 ಪ್ರದರ್ಶಕರು 50,000 ಮಂದಿಯನ್ನ ಆಕರ್ಷಿಸುವ ನಿರೀಕ್ಷೆಯಿದ್ದು, ನವೋದ್ಯಮಗಳನ್ನು ಪ್ರಸ್ತುತಪಡಿಸಲು ಸ್ಟಾಟ್೯ ಆಫ್ ಗಳು ಮತ್ತು ಯುನಿಕಾನ್ ಗಳ ಅತಿದೊಡ್ಡ ಸಭೆ ನಡೆಯಲಿದೆ. ಕರ್ನಾಟಕ ಸರಕಾರ ಎಲೆಕ್ಟ್ರಾನಿಕ್ ಐಟಿ, ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ವತಿಯಿಂದ ಕಾರ್ಯಕ್ರಮ ನೆರವೇರಲಿದೆ.

2022 ರ ರಜತ ಮಹೋತ್ಸವದ ಸ್ಮರಣಾರ್ಥ ಫಲಕವನ್ನು ಸಿಎಂ ಬಸವರಾಜ್ ಬೊಮ್ಮಾಯಿ‌ ಅನಾವರಣಗೊಳಿಸಲಿದ್ದಾರೆ. ಐಟಿಇ ಮತ್ತು ಬಯೋಟೆಕ್ ಕ್ಷೇತ್ರದ 35 ಕಂಪನಿಗಳನ್ನ ಗೌರವಿಸಲಿದ್ದಾರೆ. ಕಾರ್ಯಕ್ರಮಕ್ಕೆ ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಇಮ್ಯಾನ್ಯುಯಲ್ ಮಾಕ್ರೋನ್, ಒಮರ್ ಬಿನ್ ಸುಲ್ತಾನ್ ಅಲ್ ಒಲಾಮಾ, ಆಸ್ಟ್ರೇಲಿಯಾದ ಟಿಮ್ ವ್ಯಾಟ್ಸ್ ಆಗಮಿಸಲಿದ್ದಾರೆ. ವಿಜ್ಞಾನ ಹಾಗೂ ಸಂಸ್ಕೃತಿ ಖಾತೆ ಸಚಿವ ಪೆಟ್ರಿ ಹ್ಯಾಂಕೋನನ್ ಅಮೆರಿಕಾ ಕೈಂಡ್ರಿಯಲ್, ಯೂನಿಕಾನ್೯ ಎನಿಸಿದ ಇನ್ ಛೊಬಿ ಸಂಸ್ಥಾಪಕ ಸಿಇಓ ನವೀನ್ ತಿವಾರಿ ಮತ್ತಿತರರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ 20 ದೇಶಗಳು ಹಾಗೂ 350 ಕ್ಕೂ ಹೆಚ್ಚು ಡೊಮೇನ್ ತಜ್ಞರು 70ಕ್ಕೂ ಅಧಿಕ ಸೆಷನ್ ಗಳು ಹಾಗೂ 5000 ವ್ಯಾಪಾರ ಪ್ರತಿನಿಧಿಗಳನ್ನ ಆಕರ್ಷಿಸಲಿದೆ. ಈ ಕಾರ್ಯಕ್ರಮವನ್ನ ಕರ್ನಾಟಕ ವಿಷನ್ ಗ್ರೂಪ್ ಗಳ ಸದಸ್ಯರು ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES