ಬೆಂಗಳೂರು: ಇಂದು ಮಧ್ಯಾಹ್ನ 2.38 ರಿಂದ 6.30 ಗಂಟೆ ವರೆಗೆ ಚಂದ್ರಗ್ರಹಣ ಹಿನ್ನಲೆ ಮೌಡ್ಯ ವಿರೋಧಿ ಒಕ್ಕೂಟ ಇಂದು ಬೆಂಗಳೂರಿನ ಟೌನ್ ಹಾಲ್ ಬಳಿ ಮೌಢ್ಯತೆ ವಿರುದ್ದ ಸಮರ ಸಾರಿತು.
ಇಂದು ಚಂದ್ರ ಗ್ರಹಣದ ಪ್ರಯುಕ್ತ ದೇಶಾದ್ಯಂತ ಹಲವೆಡೆ ವಿವಿಧ ರೀತಿಯ ಆಚರಣೆ, ಉಪವಾಸಗಳನ್ನು ಜನ ಮಾಡಿ ಚಂದ್ರ ಗ್ರಹಣವನ್ನು ಪಾಲನೆ ಮಾಡುತ್ತಿದ್ದಾರೆ. ಆದರೆ ಇಂದು ಬೆಂಗಳೂರಿನ ಟೌನ್ ಹಾಲ್ ಮೆಟ್ಟಿಲುಗಳ ಮೇಲೆ ಮೌಡ್ಯ ವಿರೋಧಿ ಒಕ್ಕೂಟ ಜನರ ಮೌಢ್ಯತೆಗೆ ಸೆಡ್ಡು ಹೊಡೆದು, ಗ್ರಹಣ ವೇಳೆ ಉಪಾಹಾರವನ್ನೂ ಸೇವಿಸಿರುವ ಘಟನೆ ನಡೆದಿದೆ.
ಚಂದ್ರ ಗ್ರಹಣ ಆರಂಭವಾಗಿ ಮುಗಿಯವವರೆಗೂ ಆಹಾರ, ನೀರನ್ನು ಸೇವಿಸಬಾರದು ಎಂದು ಕೆಲವರ ನಂಬಿಕೆಯಾಗಿದೆ. ಆದರೆ ಮೌಢ್ಯತೆ ವಿರುದ್ಧ ಸೆಡ್ಡು ಹೊಡೆದು ಚಂದ್ರ ಗ್ರಹಣದ ವೇಳೆಯಲ್ಲಿ ನೀರು ಕುಡಿದು, ಹಣ್ಣು, ಸಮೋಸ ತಿಂದು ಪ್ರತಿಭಟನೆ ಮಾಡಲಾಯಿತು.