Monday, December 23, 2024

ಫ್ಯಾಮಿಲಿ ಜೊತೆ ಬಂದು ಅಬ್ಬರಿಸಿದ ಡೈನಾಮಿಕ್ ಪ್ರಿನ್ಸ್ ಪ್ರಜ್ಜು

ಹ್ಯಾಂಡ್ಸಮ್ ಹಂಕ್ ಪ್ರಜ್ವಲ್ ದೇವರಾಜ್, ಡೈನಾಮಿಕ್ ಫ್ಯಾಮಿಲಿ ಸಮೇತ ಬಂದು ಅಬ್ಬರಿಸಿದ್ದಾರೆ. ಯೆಸ್.. ಟ್ರೈಲರ್ ಲಾಂಚ್ ಮಾಡೋ ಮೂಲಕ ತಮ್ಮ ಮುಂದಿನ ಚಿತ್ರದ ಗಮ್ಮತ್ತು ಅರ್ಥೈಸಿದ್ದಾರೆ. ಹೈ- ವೋಲ್ಟೇಜ್ ಆ್ಯಕ್ಷನ್ ಧಮಾಕ ತೋರಿಸೋಕೆ ಮೂರು ವೆರೈಟಿ ಶೇಡ್ಸ್​​ನಲ್ಲಿ ಕಮಾಲ್ ಮಾಡಲಿದ್ದಾರೆ. ಇಷ್ಟಕ್ಕೂ ಅಬ್ಬರ ಟ್ರೈಲರ್ ಹೇಗಿದೆ..? ಪ್ರಜ್ಜು ಫ್ಯಾಮಿಲಿ ಹೇಳಿದ್ದೇನು ಅಂತೀರಾ..? ನೀವೇ ಓದಿ.

  • ಮೂರು ವೆರೈಟಿ ಶೇಡ್​​ಗಳಲ್ಲಿ ಪ್ರಜ್ವಲ್ ದೇವರಾಜ್ ಕಮಾಲ್
  • ಹೈ- ವೋಲ್ಟೇಜ್ ಌಕ್ಷನ್ ವೆಂಚರ್​ಗೆ ಸಸ್ಪೆನ್ಸ್ ಥ್ರಿಲ್ಲರ್ ಟಚ್
  • ‘ಅಬ್ಬರ’ದ ಗಮ್ಮತ್ತು ಹೆಚ್ಚಿಸಿದ KGF​ ತಂತ್ರಜ್ಞ ರವಿ ಬಸ್ರೂರು

ಕೆ. ರಾಮ್​ನಾರಾಯಣ್ ನಿರ್ದೇಶನದ ಅಬ್ಬರ ಸಿನಿಮಾ ಲೇಟ್ ಆದ್ರೂ ತುಂಬಾ ಲೇಟೆಸ್ಟ್ ಆಗಿ ಬರ್ತಿದೆ. ಹೌದು.. ಕೊರೋನಾದಿಂದಾಗಿ ರಿಲೀಸ್ ತಡವಾದ್ರೂ, ಕಥೆ ಹಾಗೂ ಎಂಟರ್​ಟೈನಿಂಗ್ ಎಲಿಮೆಂಟ್ಸ್​​ನಿಂದ ಸಿನಿಮಾ ಜೀವಂತವಾಗಿದೆ. ಟೀಸರ್​ ಹಾಗೂ ಸಾಂಗ್ಸ್​ನಿಂದ ಗಮನ ಸೆಳೆದಿದ್ದ ಅಬ್ಬರ, ಇದೀಗ ಟ್ರೈಲರ್​ನಿಂದ ಮತ್ತಷ್ಟು ಜೋರಾಗಿ ಅಬ್ಬರಿಸ್ತಿದೆ.

ಇದೇ ಮೊದಲ ಬಾರಿಗೆ ಸುಮಾರು ನಾಲ್ಕೈದು ಶೇಡ್​ಗಳಲ್ಲಿ ಬಣ್ಣ ಹಚ್ಚಿರೋ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಸದ್ಯ ಟ್ರೈಲರ್​ನಲ್ಲಿ ಮೂರು ಶೇಡ್ ಬಿಟ್ಟುಕೊಟ್ಟಿದ್ದಾರೆ. ಉಳಿದಂತೆ ಇನ್ನೆರಡು ಶೇಡ್ಸ್ ಸಿನಿಮಾದಲ್ಲೇ ರಿವೀಲ್ ಆಗಲಿವೆಯಂತೆ. ಪಕ್ಕಾ ಕಮರ್ಷಿಯಲ್ ಮಾಸ್ ಎಂಟರ್​ಟೈನರ್ ಇದಾಗಿದ್ದು, ಪೀರಿಯಾಡಿಕ್ ರೆಟ್ರೋ ಹಾಗೂ ಪ್ರೆಸೆಂಟ್ ಕಾಲಘಟ್ಟಕ್ಕೆ ಕನೆಕ್ಷನ್ ಇರೋ ಕಥಾನಕವಾಗಿದೆ.

ರವಿಶಂಕರ್, ಕೋಟೆ ಪ್ರಭಾಕರ್, ಶೋಭರಾಜ್ ಹೀಗೆ ನುರಿತ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದು, ಬಹುದಿನಗಳ ನಂತ್ರ ಆರ್ಮುಗಂ ರವಿಶಂಕರ್ ಖಡಕ್ ಖಳನಾಯಕನಾಗಿ ಆರ್ಭಟಿಸಲಿದ್ದಾರೆ. ಅಂದಹಾಗೆ ಇಲ್ಲಿ ಪ್ರಜ್ವಲ್ ಜೊತೆ ಮೂರು ಮಂದಿ ನಾಯಕನಟಿಯರು ಕಾಣಸಿಗಲಿದ್ದಾರೆ. ರಾಜ್​ಶ್ರೀ ಪೊನ್ನಪ್ಪ, ಲೇಖಾಚಂದ್ರ ಹಾಗೂ ನಿಮಿಕಾ ರತ್ನಾಕರ್ ಹೀಗೆ ಮೂರು ಮಂದಿ ಚೆಲುವೆಯರು ಚಿತ್ರದ ಗ್ಲಾಮರ್ ಹೆಚ್ಚಿಸಲಿದ್ದಾರೆ.

ರೀಸೆಂಟ್ ಆಗಿ ಟ್ರೈಲರ್ ಲಾಂಚ್ ಇವೆಂಟ್ ಅರ್ಥಪೂರ್ಣವಾಗಿ ನಡೆಯಿತು. ಅಲ್ಲಿ ಪ್ರಜ್ವಲ್​ಗೆ ಸಾಥ್ ನೀಡಲು ಇಡೀ ಡೈನಾಮಿಕ್ ಫ್ಯಾಮಿಲಿ ಹಾಜರಿತ್ತು. ತಂದೆ ದೇವರಾಜ್, ತಾಯಿ ಚಂದ್ರಮ್ಮ, ಸಹೋದರ ಪ್ರಣಾಮ ಹಾಗೂ ಪತ್ನಿ ರಾಗಿಣಿ ಚಂದ್ರನ್ ಹೀಗೆ ಕಂಪ್ಲೀಟ್ ಸೆಲೆಬ್ರಿಟಿ ಫ್ಯಾಮಿಲಿ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇಂಟರೆಸ್ಟಿಂಗ್.

ಬೈಟ್: ಪ್ರಜ್ವಲ್ ದೇವರಾಜ್, ನಟ

ಬೈಟ್: ದೇವರಾಜ್, ನಟ

ಬೈಟ್: ರಾಗಿಣಿ ಚಂದ್ರನ್, ನಟಿ

ಬೈಟ್: ಕೆ. ರಾಮ್​ನಾರಾಯಣ್, ನಿರ್ದೇಶಕ

ಸಿ ಅಂಡ್ ಎಂ ಮೂವೀಸ್ ಬ್ಯಾನರ್​ನಡಿ ಬಸವರಾಜ್ ಮಂಚಯ್ಯ ಹಿತ್ತಲಪುರ ನಿರ್ಮಾಣದ ಈ ಸಿನಿಮಾ ಕಮರ್ಷಿಯಲ್ ಅಂಶಗಳಿಂದ ಸೂಪರ್ ಅನಿಸಿದೆ. ಅಲ್ಲದೆ, ಔಟ್ ಅಂಡ್ ಔಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಅಂದ್ರೆ ನೋ. ಒಂದೊಳ್ಳೆ ಎಮೋಷನಲ್ ಕಥಾನಕದೊಂದಿಗೆ ಸಿನಿಮಾ ತೆರೆದುಕೊಳ್ಳಲಿದ್ದು, ಆ ಎಮೋಷನ್​​ಗಾಗಿ ನಾಯಕನಟ ನಾನಾ ಅವತಾರ ತಾಳೋದು ಒನ್​ಲೈನ್ ಸ್ಟೋರಿ.

ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಬ್ಯಾಗ್ರೌಂಡ್ ಮ್ಯೂಸಿಕ್ ಹಾಗೂ ಹಾಡುಗಳನ್ನ ಸಂಯೋಜಿಸಿದ್ದು, ಸೌಂಡಿಂಗ್ ಇಂಪ್ರೆಸ್ಸೀವ್ ಆಗಿದೆ. ಜೆ ಕೆ ಗಣೇಶ್ ಸಿನಿಮಾಟೋಗ್ರಫಿ, ವೆಂಕಟೇಶ್ ಶಾರ್ಪ್​ ಎಡಿಟಿಂಗ್ ಚಿತ್ರಕ್ಕಿದ್ದು, ಅಬ್ಬರ ಸಿನಿಮಾ ಇದೇ ನವೆಂಬರ್ 18ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES