Thursday, January 23, 2025

ಬಿಳಿಗಿರಿರಂಗಪ್ಪನ ಹುಂಡಿಯಲ್ಲಿ ಬರೋಬ್ಬರಿ 37 ಲಕ್ಷ ಸಂಗ್ರಹ..!

ಚಾಮರಾಜನಗರ:ಬಿಳಿಗಿರಿರಂಗಪ್ಪನ ಹುಂಡಿಯಲ್ಲಿ 37 ಲಕ್ಷ ಸಂಗ್ರಹವಾಗಿದೆ. ಅಮೇರಿಕನ್ ಡಾಲರ್ ಕೂಡ ಅರ್ಪಣೆಯಾಗಿದೆ. ಚಾಮರಾಜನಗರ ಜಿಲ್ಲೆ ಯಳಂದೂರು‌ ‌ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ‌ಸ್ವಾಮಿ ಬೆಟ್ಟ.

3 ತಿಂಗಳ‌ ಬಳಿಕ ನಡೆದ ದೇವಾಲಯ ಹುಂಡಿ ಎಣಿಕೆ. ಬರೋಬ್ಬರಿ 37 ಲಕ್ಷ ರೂ. ಸಂಗ್ರಹ, ಡಾಲರ್ ಗಳನ್ನೂ ಅರ್ಪಿಸಿದ ವಿದೇಶಿ ಭಕ್ತರು. ಕಳೆದ 3 ತಿಂಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 37,74,562 ರೂ. ಹಣ ಸಂಗ್ರಹ.200 ಅಮೆರಿಕನ್ ಡಾಲರ್, 10 ಕೆನಡಾ ಡಾಲರ್ ನ್ನೂ ಕೂಡ ರಂಗನಾಥನಿಗೆ ಅರ್ಪಿಸಿರುವ ಭಕ್ತರು.ವವಿದೇಶಿಗರು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ಕೊಡುವುದರಿಂದ ಹುಂಡಿಯಲ್ಲಿ ಡಾಲರ್ ಪತ್ತೆ.

11 ಸಣ್ಣ ಮಾಂಗಲ್ಯ, 1 ಬೆಳ್ಳಿ ಮುಖವಾಡ, 1 ಪುಟಾಣಿ ಘಂಟೆ- ಆರತಿ, 2 ಬೆಳ್ಳಿ ಕೊಳಲು, 2 ದೇವರ ಮೂರ್ತಿ ಕೂಡ ಸಂಗ್ರಹ. ಹರಕೆ ಕೊತ್ತ ಭಕ್ತರು ಕಾಣಿಕೆ ರೂಪದಲ್ಲಿ ಸ್ವಾಮಿಗೆ ಅರ್ಪಿಸಿರುವ ಕಾಣಿಕೆ. ಸತತ ಮಳೆ ಪರಿಣಾಮ ಹಸಿರಿನ ಚೆಲುವಿನಿಂದ ಕಂಗೊಳಿಸುತ್ತಿರುವ ಬಿಳಿಗಿರಿರಂಗನ ಬೆಟ್ಟ. ಇದೀಗ ದಿನೇ ದಿನೇ ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ. ವಾರಾಂತ್ಯದಲ್ಲಿ ಪ್ರಕೃತಿ ಚೆಲುವು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಸೇರುತ್ತಿರುವ ಪ್ರವಾಸಿಗರು.

RELATED ARTICLES

Related Articles

TRENDING ARTICLES