ಚಾಮರಾಜನಗರ : ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆ ಮಾಡಲಾಗಿದೆ. ಬಿಳಿಗಿರಿರಂಗಪ್ಪನ ಹುಂಡಿಯಲ್ಲಿ ಬರೋಬ್ಬರಿ 37 ಲಕ್ಷ ಕಾಣಿಕೆ ಸಂಗ್ರಹವಾಗಿದೆ.
ದೇವಾಲಯದಲ್ಲಿ 3 ತಿಂಗಳ ಬಳಿಕ ಹುಂಡಿ ಎಣಿಕೆ ನಡೆದಿದೆ. ವಿದೇಶಿ ಭಕ್ತರು ಕೂಡ ಅಮೆರಿಕನ್ ಡಾಲರ್ಗಳನ್ನು ಅರ್ಪಣೆ ಮಾಡಿದ್ದಾರೆ. ಕಳೆದ 3 ತಿಂಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 37 ಲಕ್ಷ ರೂ. ಹಣ ಸಂಗ್ರಹವಾಗಿದೆ. ಭಕ್ತರು 200 ಅಮೆರಿಕನ್ ಡಾಲರ್, 10 ಕೆನಡಾ ಡಾಲರ್ನ್ನೂ ಕೂಡ ರಂಗನಾಥನಿಗೆ ಅರ್ಪಿಸಿದ್ದಾರೆ.
ವಿದೇಶಿಗರು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ಕೊಡುವುದರಿಂದ ಹುಂಡಿಯಲ್ಲಿ ಡಾಲರ್ ಕೂಡ ಪತ್ತೆಯಾಗಿದೆ. 11 ಸಣ್ಣ ಮಾಂಗಲ್ಯ, 1 ಬೆಳ್ಳಿ ಮುಖವಾಡ, 1 ಪುಟಾಣಿ ಘಂಟೆ-ಆರತಿ, 2 ಬೆಳ್ಳಿ ಕೊಳಲು, 2 ದೇವರ ಮೂರ್ತಿ ಕೂಡ ಸಂಗ್ರಹವಾಗಿದೆ. ಬಿಳಿಗಿರಿರಂಗನ ಬೆಟ್ಟ ಸತತವಾದ ಮಳೆ ಪರಿಣಾಮದಿಂದ ಹಸಿರಿನ ಚೆಲುವಿನಿಂದ ಕಂಗೊಳಿಸುತ್ತಿದೆ. ಇದೀಗ ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿಗರು ವಾರಾಂತ್ಯದಲ್ಲಿ ಪ್ರಕೃತಿ ಚೆಲುವು ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರ್ತಿದ್ದಾರೆ.