Thursday, January 23, 2025

2023ರ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ದಳಪತಿಗಳು ಪ್ಲಾನ್..!

ಬೆಂಗಳೂರು:2023ರ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ದಳಪತಿಗಳು ಪ್ಲಾನ್ ಮಾಡಿದ್ದಾರೆ. ಚುನಾವಣೆ ಚಾಣಾಕ್ಷ ಪ್ರಶಾಂತ ಕಿಶೋರ್ ಮಾದರಿಯಲ್ಲೇ ತಂತ್ರಗಾರಿಕೆ ರೂಪಿಸಲು ಹೆಚ್​ಡಿಕೆ ಸಜ್ಜು.

400 ಜನ ಚುನಾವಣಾ ಪರಿಣಿತರ ತಂಡದಿಂದ ಎಲೆಕ್ಷನ್ ತಯಾರಿ.6 ತಿಂಗಳ ಕಾಲ ತಂತ್ರಗಾರಿಕೆ ರೂಪಿಸಲಿರುವವ 400 ಜನರ ತಂಡ.ದೆಹಲಿ, ತೆಲಂಗಾಣ, ತಮಿಳುನಾಡಿನಿಂದ ಬಂದಿರುವ ಚುನಾವಣಾ ಪರಿಣತರ ತಂಡ.ತಮಿಳುನಾಡಿನಲ್ಲೂ ಕೂಡ ಪ್ರತ್ಯೇಕ ಕಾರ್ಯತಂತ್ರ ರೂಪಿಸುವ ಮೂಲಕ ಗೆಲುವು ಸಾಧಿಸಿದ್ದ DMK ಪಕ್ಷ. ಅದೇ ರೀತಿ ತೆಲಂಗಾಣ, ಆಂದ್ರ, ಪಶ್ಚಿಮ ಬಂಗಾಳ ಕೂಡ ಪರಿಣತರ ತಂಡದಿಂದ ಪಕ್ಷಕ್ಕೆ ಮುನ್ನಡೆ ಆಯ್ತು.ಅದೇ ರೀತಿ ಹೆಚ್ ಡಿಕೆ ಕೂಡ ಪ್ರಾದೇಶಿಕ ಪಕ್ಷಗಳು ಅನುಸರಿಸಿರುವ ತಂತ್ರಗಾರಿಕೆ ಅನುಸರಿಸಲು ಸಿದ್ಧತೆ.

ಈಗಾಗಲೇ 400 ಜನ ತಂಡದಿಂದ ಮಾತುಕತೆ ನಡೆಸಿರುವ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ.6 ತಿಂಗಳುಗಳ ಕಾಲ ಮನೆ ಮನೆ ತಲುಪಿ ಜೆಡಿಎಸ್ ನತ್ತ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಜೊತೆ ಪ್ರತಿ ಮನೆ ತಲುಪಿ ಮತದಾರರನ್ನು ಸಳೆಯಲಿರುವ ಈ ತಂಡ. ಜೆಡಿಎಸ್ ಪಂಚರತ್ನ ಕಾರ್ಯಕ್ರಮವನ್ನು ರಾಜ್ಯದ ಪ್ರತಿ ಮನೆಗೂ ತಿಳಿಸಲು ಪರಿಣಿತರ ತಂಡ ಪ್ಲಾನ್ ಮಾಡಿದೆ. ಚುನಾವಣಾ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಈ ರೀತಿಯಾದ ತಂತ್ರಗಾರಿಕೆ ರೂಪಿಸಿದ್ದರು. ಈಗ 2023ರ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಬಾವುಟಹಾರಿಸಲು ರಾಷ್ಟ್ರೀಯ ಪಕ್ಷಗಳಂತೆ ಕಾರ್ಯತಂತ್ರ.ಈ ತಂಡಕ್ಕೆ ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್ ರಾವ್ ಕೂಡ ಸಾಥ್ ನೀಡಿದ್ದಾರೆ. ತಮ್ಮ ಚುನಾವಣಾ ಸಂದರ್ಭದಲ್ಲಿ ಕೆಲಸ ಮಾಡಿದ ಪರಿಣಿತರ ತಂಡವನ್ನು ರಾಜ್ಯಕ್ಕೆ ಕಳುಹಿಸಿರುವ ಕೆಸಿಆರ್. ಈ ಮೂಲಕ 123ರ ಗಡಿ ದಾಟಲು ಮಾಜಿ ಸಿಎಂ ಕುಮಾರಸ್ವಾಮಿ ತಂತ್ರದ ಮೇಲೆ ತಂತ್ರ ರೂಪಿಸಿದ್ದಾರೆ.

RELATED ARTICLES

Related Articles

TRENDING ARTICLES