Sunday, December 22, 2024

ಕೊನೆಗೂ ಡಾಲಿ ಜೊತೆ ರಮ್ಯಾ  ‘ಉತ್ತರಕಾಂಡ’ ಜರ್ನಿ ಶುರು

ಎಂಟು ವರ್ಷಗಳೇ ಕಳೆದು ಹೋಯ್ತು. ಇಂದಿಗೂ ರಮ್ಯಾ ನಿಮ್ಮನ್​ ನೋಡ್ಬೇಕು. ನಿಮ್ಮನ್ನ ನೋಡಲೇಬೇಕು ಆಂತಾ ಕ್ರೇಜಿ ಫ್ಯಾನ್ಸ್​ ಒಂದೇ ಕನವರಿಗೆ. ಬೆಳ್ಳಿ ತೆರೆಯ ಮೇಲೆ ಬೆಳದಿಂಗಳ ಬಾಲೆ ಯಾವಾಗ ಎಂಟ್ರಿ ಕೊಡ್ತಾರೆ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ರಮ್ಯಾ ಎಂಟ್ರಿ ಪಕ್ಕಾ ಆಗಿದೆ. ಕೊನೆಗೆ ರಮ್ಯಾ ಕಂಬ್ಯಾಕ್​​ ಫಿಕ್ಸ್​ ಆಗಿದೆ. ಈ ಬಾರಿ ನಾವ್​​ ರಮ್ಯಾ ಸುಳ್ಳು ಹೇಳ್ತಿಲ್ಲ. ರಮ್ಯಾ ನ್ಯೂ ಅಪ್ಡೆಟ್ಸ್​​ ಇಲ್ಲಿದೆ. ನೀವೇ ಓದಿ.

  • ಖೇಲ್​ ಶುರು.. ನಾಟಕ್​​ ಚಾಲು..! ಪಕ್ಕಾ ಸುಕ್ಕಾ ಕ್ಯಾಪ್ಶನ್

ಸ್ಯಾಂಡಲ್​ವುಡ್​​ ಕ್ವೀನ್​​ ರಮ್ಯಾ ಕೊನೆಗೂ ಉತ್ತರಕಾಂಡ ಚಿತ್ರದ ಮೂಲಕ ಕಂಬ್ಯಾಕ್​ ಆಗ್ತಿದ್ದಾರೆ. ಯಾವಾಗ ರಮ್ಯಾ ಬೆಳ್ಳಿ ತೆರೆಯ ಮೇಲೆ ಮಿಂಚೋದು ಎಂದು ಭಜನೆ ಮಾಡ್ತಿದ್ದ ಅಭಿಮಾನಿಗಳ ಪಾಲಿದೆ ಇದೀಗ ಸುದಿನ. ಡಾಲಿ ಜೊತೆ ರಮ್ಯಾ ಡುಯೆಟ್ ಆಡೋದು​​ ಪಕ್ಕಾ ಆಗಿದೆ. ಹೊಸ ಚಿತ್ರಕ್ಕೆ ಬಣ್ಣ ಹಚ್ಚಲಿರುವ ಮೋಹಕ ತಾರೆ ಜಾಲಿರೆಡ್ಡಿ ಜೊತೆ ಹೊಸ ಜರ್ನಿ ಶುರು ಮಾಡಲಿದ್ದಾರೆ.

ಹೊಂಬಾಳೆ ಬ್ಯಾನರ್​​ ಅರ್ಪಣೆಯೊಂದಿಗೆ, ಕೆಆರ್​​ಜಿ ಸಂಸ್ಥೆಯ ನಿರ್ಮಾಣದೊಂದಿಗೆ ರೋಹಿತ್​ ಪದಕಿ ಉತ್ತರಾಕಂಡ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳ್ತಿದ್ದಾರೆ. ಸದ್ಯ ಈ ಚಿತ್ರದ ಮುಹೂರ್ತ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿದ್ದು ಸದ್ಯದಲ್ಲೇ ಶೂಟಿಂಗ್​ ಶುರುವಾಗಲಿದೆ. ರತ್ನನ್​ ಪ್ರಪಂಚ ಸಕ್ಸಸ್​​​ ಟೀಮ್​ ಈ ಚಿತ್ರದ ಮೂಲಕ ಮತ್ತೆ ಒಂದಾಗ್ತಿದೆ.

  • ಜೋಡಿ ನಾಯಕಿಯರ ಜೊತೆ ಜಾಲಿರೆಡ್ಡಿ ಎಂಜಾಯ್​
  • ತಪ್ಪು, ಸರಿ, ಅಹಂಕಾರಗಳ ಗುದ್ದಾಟದಲ್ಲಿ ಉತ್ತರಕಾಂಡ

ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಿಂದ ರಮ್ಯಾ ಯ್ಯುಟರ್ನ್​​​ ತೆಗೆದುಕೊಂಡ ಮೇಲೆ ಫ್ಯಾನ್ಸ್​​ ಸಖತ್ ನಿರಾಸೆಯಾಗಿದ್ರು. ಇನ್ನು ಆ್ಯಪಲ್​ ಬಾಕ್ಸ್​​ ಅನ್ನೋ ತಮ್ಮದೇ ಬ್ಯಾನರ್​ ಮೂಲಕ ರಮ್ಯಾ ಹೊಸ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿಗಳು ಸುಳ್ಳಾದ್ವು. ಕೊನೆಗೂ ರಮ್ಯಾ ಉತ್ತರಾಕಂಡ ಚಿತ್ರಕ್ಕೆ ಕನ್ಫರ್ಮ್​ ಆಗಿದ್ದು, ಬೆಳ್ಳಿ ತೆರೆಯ ಮೇಲೆ ಕಮಾಲ್​ ಮಾಡೋಕೆ ಸಜ್ಜಾಗಿದ್ದಾರೆ.

ಉತ್ತರಾಕಂಡ ಸಿನಿಮಾದ  ಫೋಸ್ಟರ್​ಗಳು ಪಕ್ಕಾ ಸುಕ್ಕಾ ಶೈಲಿಯಲ್ಲಿದ್ದು ಸಿನಿರಿಸಕರ ನಿದ್ದೆಗೆಡಿಸಿವೆ. ಹೊಸ ಫ್ಲೇವರ್​ನಲ್ಲಿ ಮ್ಯಾಜಿಕ್​ ಮಾಡೋಕೆ ಬರ್ತಿದೆ ಉತ್ತರಾಕಂಡ. ಜೊತೆಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ರಮ್ಯಾ ಜೊತೆ ಗಂಧದಗುಡಿ ಖ್ಯಾತಿಯ ರಾಣಿ ಜೇನು ಸಾಥ್​ ನೀಡಿದ್ದಾರೆ.

ಮಾನವನ ಅಹಂಕಾರ, ತಪ್ಪು, ಸರಿಗಳ ಘರ್ಷಣೆಯನ್ನು ಸಿನಿಮಾದಲ್ಲಿ ತೋರಿಸೋ ಪ್ರಯತ್ನ ಮಾಡಲಾಗ್ತಿದೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​​ ಮುಹೂರ್ತಕ್ಕೆ ಅತಿಥಿಯಾಗಿ ಆಗಮಿಸೋ ಮೂಲಕ ಕಿಕ್​ಸ್ಟಾರ್ಟ್​ ಕೊಟ್ಟಿದ್ದಾರೆ. ಚಿತ್ರಕ್ಕಾಗಿ ರಮ್ಯಾ ಸ್ಪೆಷಲ್​ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಜನರ ಬದುಕಿನ ಕಥೆ ಇದಾಗಿದ್ದು, ಅದ್ಭುತವಾಗಿ ತೋರಿಸೋ ಪ್ರಯತ್ನಕ್ಕೆ ರೋಹಿತ್​ ಪದಕಿ ಸಜ್ಜಾಗಿದ್ದಾರೆ. ಎನಿವೇ ಉತ್ತರಾಕಂಡ ಚಿತ್ರಕ್ಕೆ ಆಲ್​ ದಿ ಬೆಸ್ಟ್​​ ಹೇಳೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES