Wednesday, January 22, 2025

ಕಾಶ್ಮೀರಿ ಫೈಲ್ಸ್​​ ಭಯಾನಕತೆ ಹಿಂದಿಕ್ಕಲಿದೆ ‘ದಿ ಕೇರಳ ಸ್ಟೋರಿ’​​

ಕಾಶ್ಮೀರದ ಭಯಾನಕ ಇತಿಹಾಸವನ್ನು ತೆರೆಯ ಮೇಲೆ ತೋರಿಸಲಾದ ಸಿನಿಮಾ ದಿ ಕಾಶ್ಮೀರಿ ಫೈಲ್ಸ್​​. ಕಾಶ್ಮೀರಿ ಪಂಡಿತರ ಹತ್ಯೆಯ ಇತಿಹಾಸದ ಪುಟಗಳು ಎಲ್ಲರ ಮೈನವಿರೇಳಿಸುವಂತೆ ಮಾಡಿದ್ವು. ಇದೀಗ, ಮತ್ತೊಂದು ರೋಚಕ ಕಥೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ. ಯೆಸ್​​.. ಬೆಚ್ಚಿ ಬೀಳಿಸೋ ಹೊಸ ಸಿನಿಮಾ ತೆರೆಗೆ ಬರಲಿದೆ. ಯಾವ ಸಿನಿಮಾ..? ಏನದು ಇಂಟ್ರೆಸ್ಟಿಂಗ್​ ಸ್ಟೋರಿ ಅನ್ನೋ ಕುತೂಹಲ ನಿಮಗಿದ್ರೆ, ಈ ಸ್ಟೋರಿ ಮಿಸ್​ ಮಾಡದೇ ನೀವೇ ಓದಿ.

  • ಮರುಕಳಿಸಲಿದೆ ಮತ್ತೊಂದು ರೋಚಕ ಇತಿಹಾಸದ ಚಿತ್ರಕಥೆ

ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಸಿನಿಮಾ ದಿ ಕಾಶ್ಮೀರಿ ಫೈಲ್ಸ್​​​. ಕಾಶ್ಮೀರಿ ಪಂಡಿತರ ಅಮಾನವೀಯ ಹತ್ಯೆಯ ಕುರಿತಾದ ಸಿನಿಮಾ ಇದಾಗಿದ್ದು ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡ್ತು. ಬಹಳಷ್ಟು ಚರ್ಚೆ, ವಿವಾದಗಳು ಭುಗಿಲೆದ್ದರೂ ವರ್ಲ್ಡ್​​ ವೈಡ್​​ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾವಾಯ್ತು.

ಸದ್ಯ ಇಂತದೇ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದ್ದು, ಮತ್ತೊಮ್ಮೆ ಪ್ರೇಕ್ಷಕರ ಎದೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಬೆಚ್ಚಿ ಬೀಳಿಸುವ ಕಥೆಯನ್ನು ಹೊತ್ತು ತಂದಿದೆ ದಿ ಕೇರಳ ಸ್ಟೋರಿ. ಈ ಚಿತ್ರದ ಟೀಸರ್​ ರಿಲೀಸ್​ ಆಗಿದ್ದು ಎಲ್ಲಾ ಕಡೆ ಪರ, ವಿರೋಧದ ಚರ್ಚೆಗಳು ಶುರುವಾಗಿವೆ. ಸಿಂಗಲ್​ ಟೀಸರ್​​​​ ಭಯಾನಕ ಅಧ್ಯಾಯಕ್ಕೆ ಹೊಸ ಮುನ್ನುಡಿ ಬರೆಯೋ ಮುನ್ಸೂಚನೆ ಕೊಟ್ಟಿದೆ.

  • ದೇವರ ನಾಡಲ್ಲಿ 32,000 ಮಹಿಳೆಯರ ಮತಾಂತರ..?!
  • ಕೇರಳದ ಸೆನ್ಸೇಷನಲ್​​ ಸ್ಟೋರಿಗೆ ಶುರುವಾಯ್ತು ವಿರೋಧ

ಕೇರಳದ ಹಿಂದೂ ಯುವತಿಯರನ್ನು ಹೇಗೆ ಮತಾಂತರ ಮಾಡಿ ಐಸಿಎಸ್​ಗೆ ಕಳುಹಿಸಿಕೊಡಲಾಗುತ್ತೆ ಅನ್ನೋ ಕಥೆಯ ಮೇಲೆ ಈ ಸಿನಿಮಾ ಮಾಡಲಾಗಿದೆ. ಸುದೀಪ್ಟೋ ಸೇನ್​ ಆ್ಯಕ್ಷನ್​ ಕಟ್​ ಹೇಳಿರುವ ರೋಚಕ ಚಿತ್ರಕ್ಕೆ ಅಮೃತ್​ಲಾಲ್​​ ಶಾ ಬಂಡವಾಳ ಹೂಡಿದ್ದಾರೆ. ಸದ್ಯ ಟೀಸರ್​ನಲ್ಲಿ ಬುರ್ಖಾ ಧರಿಸಿ ದುಃಖ ತೋಡಿಕೊಳ್ಳುತ್ತಿರುವ ಮಹಿಳೆಯ ವೀಡಿಯೋ ಎಲ್ಲಾ ಕಡೆ ಅಲ್ಲೋಲ ಕಲ್ಲೋಲ ಸೃಷ್ಠಿಸಿದೆ. ರಿಲೀಸ್​ಗೂ ಮುನ್ನವೇ ಸಖತ್​ ಹೈಪ್​ ಕ್ರಿಯೇಟ್​ ಮಾಡಿದೆ.

ಡೈರೆಕ್ಟರ್​ ಸುದಿಪ್ಟೋ ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಹಾರ್ಡ್​ ವರ್ಕ್​ ಮಾಡಿದ್ದಾರೆ. ಅರಬ್​, ಕೇರಳ ಸೇರಿದಂತೆ ನಾನಾ ಕಡೆ ಸಖತ್​ ರಿಸರ್ಚ್​​ ಮಾಡಿ ಕಥೇ ಹೆಣೆದಿದ್ದಾರೆ. ಪ್ರೀತಿಯ ಹೆಸರಲ್ಲಿ ನಡೆಯೋ ಮತಾಂತರದ ಮೇಲೆ ಸಿನಿಮಾ ಕಥೆ ಸಾಗಲಿದೆ. ಐಸಿಸ್​ ಗುಲಾಮರಾಗಿ ಮಾರಾಟವಾದ ಹಿಂದೂ ಯುವತಿಯರ ಘೋರ ಕಥೆ ಇದಾಗಿದ್ದು 32 ಸಾವಿರಕ್ಕೂ ಅಧಿಕ ಯುವತಿಯರು ಈ ಸಂಕಷ್ಟದಲ್ಲೀ ಸಿಲುಕಿದ್ದರು ಎನ್ನಲಾಗ್ತಿದೆ. ಆದ್ರೆ, ಸದ್ಯ ಕೆಲವ್ರು ಇದನ್ನು ವಿರೋಧಿಸ್ತಿದ್ದಾರೆ.

ಟೀಸರ್​ನಲ್ಲಿ ಶಾಲಿನಿ ಉನ್ನಿಕೃಷ್ಣನ್​ , ಫಾತೀಮಾ ಬಾ ಆಗಿ ಬದಲಾದ ಕಥೆ ವಿವರಿಸಿದ್ದಾರೆ. ಅಪಾಯಕಾರಿ ಟೆರರಿಸ್ಟ್​ ಬಗ್ಗೆ ಮಾಹಿತಿ ಕೊಡೋ ಫಾತೀಮಾ ಕೇರಳ ಸ್ಟೋರಿಯ ಬಗ್ಗೆ ಹೇಳ್ತಾರೆ. ಚಿತ್ರದ ನಾಯಕಿ ಅದಾ ಶರ್ಮಾ ಕೂಡ ಈ ಟೀಸರ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದು ಸಖತ್​ ಹೈಪ್​ ಕ್ರಿಯೇಟ್​ ಮಾಡಿದೆ. ಹೂತು ಹೋಗಿದ್ದ ಕಥೆಗೆ ಹೊಸ ರೂಪ ಕೊಟ್ಟು ನಗ್ನ ಸತ್ಯಗಳನ್ನು ಈ ಸಿನಿಮಾ ಮೂಲಕ ತೋರಿಸಲಾಗ್ತಿದೆಯಂತೆ. ಎನಿವೇ, ಈ ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಸೈ ಅಂತಾರಾ ಅನ್ನೋದನ್ನು ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ ​​​​​

RELATED ARTICLES

Related Articles

TRENDING ARTICLES