Thursday, December 19, 2024

ಸ್ಯಾಂಡಲ್​ವುಡ್​ ನಟರಲ್ಲಿ ಅತ್ಯಧಿಕ ಪಾಲೋವರ್ಸ್​ ಹೊಂದಿದ ಕೀರ್ತಿ ರಾಕಿ ಭಾಯ್​​ ಪಾಲಿಗೆ.!

ಬೆಂಗಳೂರು: ಕೆಜೆಎಫ್​ ಮೂಲಕ ಟಾಲಿವುಡ್​, ಕಾಲಿವುಡ್​, ಮಾಲಿವುಡ್​, ಬಾಲಿವುಡ್​ನಲ್ಲಿ ಭರ್ಜರಿ ಸೌಂಡ್​ ಮಾಡಿ ತನ್ನ ಬ್ರ್ಯಾಂಡ್ ಹೆಚ್ಚಿಸಿಕೊಂಡ ನಟ ಯಶ್. ಕೆಜಿಎಫ್​​ ಸಿನಿಮಾಗೆ ಹೊಡೆತಕ್ಕೆ ವಿವಿಧ ಭಾಷೆಯ ಸಿನಿಮಾಗಳು ಮಖಾಡೆ ಮಲಗಿದ್ದಾವೆ. ಅದ್ರಲ್ಲಿ ಕಲೆಕ್ಷನ್​ನಲ್ಲಿ ಕೆಜೆಎಫ್​ ಹಲವು ದಾಖಲೆಗಳು ಉಡೀಸ್​ ಮಾಡಿತು. ಅದರಂತೆ ಈ ಸಿನಿಮಾದಿಂದ ಯಶ್​ಗೆ ವಿವಿಧ ರಾಜ್ಯಗಳಲ್ಲಿ ಫ್ಯಾನ್ಸ್​ ಕೂಡ ಹೆಚ್ಚಾಗಿದ್ದಾರೆ.

ನಟ ಯಶ್​ಗೆ ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಟಾಗ್ರಾಮ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಸಂಖ್ಯೆ ಹೊಂದಿದ್ದು, ಈ ಕಾರಣಕ್ಕೆ ಅವರು ಈಗ ಸುದ್ದಿಯಲ್ಲಿದ್ದಾರೆ. ಯಶ್​ ಒಟ್ಟು 12 ಮಿಲಿಯನ್​  ಫಾಲೋವರ್ಸ್‌ ಹೊಂದಿದ್ದಾರೆ.

ದಕ್ಷಿಣ ಭಾರತದ ಸಿನಿಮಾದ ನಟರಲ್ಲಿ 3 ನೇ ಹಾಗೂ ಸ್ಯಾಂಡಲ್​ವುಡ್​ ನಟರಲ್ಲಿ ಇನ್ಸ್ಟಾಗ್ರಾಮ್ ಫಾಲೋವರ್ಸ್​ನಲ್ಲಿ ಮೊದಲ​ ಸ್ಥಾನದಲ್ಲಿ ನಟ ಯಶ್​ ಪಾತ್ರರಾಗಿದ್ದಾರೆ. ದಕ್ಷಿಣ ಭಾರತದ ನಟರಲ್ಲಿ ಅತೀ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದವರಲ್ಲಿ ಮೊದಲ ಸ್ಥಾನದಲ್ಲಿ ಅಲ್ಲು ಅರ್ಜುನ್​ ಅವರು 19.7 ಮಿಲಿಯನ್​, ಎರಡನೇ ಸ್ಥಾನದಲ್ಲಿ ವಿಜಯ್ ದೇವರಕೊಂಡ 17.7 ಮಿಲಿಯನ್​ ಪಾಲೋವರ್ಸ್​ ಹೊಂದಿದ್ದಾರೆ.

ಅದರಂತೆ ಯಶ್​ ನಂತರ ಸ್ಯಾಂಡ್​ಲವುಡ್​ ನಟರಲ್ಲಿ ದ್ರುವ ಸರ್ಜಾ 2.2 ಮಿಲಿಯನ್​, ಪುನೀತ್​ ರಾಜ್​ಕುಮಾರ್ 2 ಮಿಲಿಯನ್​ ಇನ್ಸ್ಟಾಗ್ರಾಮ್ ಫಾಲೋವರ್ಸ್​ ಹೊಂದಿದ್ದಾರೆ. ಈ ಬಗ್ಗೆ ತಮ್ಮ ನಟರನ್ನ ಅಭಿಮಾನಿಗಳು ತಮ್ಮ ನಟರನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿ ತಮ್ಮ ನಟರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES