ಬೆಂಗಳೂರು: ಓಲಾ ಉಬರ್ ಕಂಪನಿಗಳ ಹಗಲು ದರೋಡೆ ಬೀಳುತ್ತಾ ಕಡಿವಾಣ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಇಂದು ನಿರ್ಧಾರವಾಗಲಿದೆ ಓಲಾ, ಉಬರ್ ರ್ಯಾಪಿಡೋ ಆಟೋ ದರ. ಹೈಕೋರ್ಟ್ ನಿಂದ ಇಂದು ಹೊರಬೀಳಲಿದೆ ಮಹತ್ವದ ಆದೇಶ.
ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ ಆಟೋ ದರ ನಿಗದಿ ಬಗ್ಗೆ ವಿಚಾರಣೆ, ಹೈಕೋರ್ಟ್ ಮೆಟ್ಟಿಲು ಏರಿರುವ ಕಂಪನಿಗಳು, ಆಟೋ ಚಾಲಕ ಸಂಘಟನೆಗಳು. ಆ್ಯಪ್ ಆಧಾರಿತ ಆಟೋ ದರದ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಸಲಿರುವ ಸಾರಿಗೆ ಇಲಾಖೆ, ಹದಿನೈದು ದಿನದೊಳಗೆ ಮೂರು ಕಂಪನಿಗಳು, ಆಟೋ ಸಂಘಟನೆಗಳು ಹಾಗೂ ಪ್ರಯಾಣಿಕರ ಜೊತೆ ಸಭೆ ನಡೆಸಿ, ನ್ಯಾಯಯುತ ದರವನ್ನು ನಿಗದಿ ಮಾಡಿ,ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲು ಸೂಚಿಸಿದ್ದ ನ್ಯಾಯಾಧೀಶರು.
ಸಾರಿಗೆ ಇಲಾಖೆ ಹದಿನೈದು ದಿನದಲ್ಲಿ ಕೇವಲ ಒಂದೇ ಒಂದು ಸಭೆ ಮಾಡಿ ಸುಮ್ಮನಾಗಿದೆ. ಕಾಟಚಾರಕ್ಕೆ ಕೇವಲ ಕಂಪನಿಗಳ ಜೊತೆಗೆ ಮಾತ್ರ ಸಭೆ ಮಾಡಿದ್ದ ಸಾರಿಗೆ ಇಲಾಖೆ. ಈಗಾಗಲೇ ಈ ಬಗ್ಗೆ ಆಟೋ ಸಂಘಟನೆಗಳು, ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಇಂದು ಹೈಕೋರ್ಟ್ ನಲ್ಲಿ ನ್ಯಾಯಾಧೀಶರ ಗಮನಕ್ಕೆ ತರಲು ಪ್ಲಾನ್ ಮಾಡಲಾಗಿದೆ. ಸಾರಿಗೆ ಇಲಾಖೆ ಕಂಪನಿಗಳ ಪರವಾಗಿ ಕೆಲಸ ಮಾಡ್ತಿದೆ, ಆ ಕಾರಣಕ್ಕಾಗಿ ಆಟೋ ಸಂಘಟನೆಗಳು, ಪ್ರಯಾಣಿಕರ ವೇದಿಕೆಯನ್ನು ಸಭೆಗೆ ಆಹ್ವಾನಿಸಲಿಲ್ಲ ಎಂದು ದೂರು ಕೇಳಿಬಂದಿತ್ತು.
ಕಳೆದ ಬಾರಿ ನಡೆದ ಸಭೆಯಲ್ಲಿ ಮೂರು ಕಂಪನಿಗಳು ನೂರು ರುಪಾಯಿ ಮಿನಿಮಮ್ ದರ ಫಿಕ್ಸ್ ಗೆ ಪಟ್ಟು, ಅಂದಿನ ಸಭೆಯಲ್ಲಿ ದರ ನಿಗದಿ ಅಂತಿಮವಾಗಲಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಆ್ಯಪ್ ಆಧಾರಿತ ಆಟೋ ಕಂಪನಿಗಳಿಗೆ ದರ ಫಿಕ್ಸ್ ಮಾಡಲು ಮನಸಿಲ್ಲ.ಆ ಕಾರಣಕ್ಕಾಗಿಯೇ ಹದಿನೈದು ದಿನ ಕಾಲಾವಕಾಶ ನೀಡಿದ್ರು ಇಲ್ಲಿಯವರೆಗೆ ದರ ನಿಗದಿ ಮಾಡಿಲ್ಲ.ನೂರು ರುಪಾಯಿ ಮಿನಿಮಮ್ ದರಕ್ಕೆ ಒಪ್ಪಿಗೆ ಸೂಚಿಸಿ ವರದಿ ನೀಡಲಿದ್ದಾರ ಸಾರಿಗೆ ಇಲಾಖೆಯ ಅಧಿಕಾರಿಗಳು.ಸದ್ಯ ಹೈಕೋರ್ಟ್ ಸೂಚನೆಯಂತೆ ಮಿನಿಮಮ್ ದರ ಪಡೆದುಕೊಳ್ಳುತ್ತಿರುವ ಆಟೋ ಆ್ಯಪ್ ಕಂಪನಿಗಳು.ಕಳೆದ ಹದಿನೈದು ದಿನಗಳಿಂದ ಪ್ರಯಾಣಿಕರು ನೆಮ್ಮದಿಯಾಗಿ ಅಟೋದಲ್ಲಿ ನ್ಯಾಯಯುತ ದರ ನೀಡಿ ಪ್ರಯಾಣ ಮಾಡುತ್ತಿದ್ದರು.