Saturday, July 27, 2024

ರಸ್ತೆ ರಸ್ತೆಯಲ್ಲಿ ಮೊಬೈಲ್ ಕಿತ್ತು ಪರಾರಿಯಾಗ್ತಿದ್ದ ಗ್ಯಾಂಗ್ ಅಂದರ್

ಬೆಂಗಳೂರು : ಒಂದೇ ಒಂದು ಸೆಕೆಂಡ್ ಅಷ್ಟೇ ರಸ್ತೆಯಲ್ಲಿ ಓಡಾಡೋರು ಅಪ್ಪಿ ತಪ್ಪಿ ಮೊಬೈಲ್ ಹೊರಗೆ ತೆಗೆದ್ರೆ ಮುಗೀತು.ಅದು ಮಹಿಳೆನೇ ಆಗಿರ್ಲಿ ಪುರುಷನೇ ಆಗಿರ್ಲಿ ಮೊಬೈಲ್ ಕಿತ್ತು ಎಸ್ಕೇಪ್ ಆಗಿಬಿಡ್ತಾರೆ.ಅಂತದ್ದೇ ಒಂದು ಖತರ್ನಾಕ್ ಗ್ಯಾಂಗ್ ಮಡಿವಾಳ ಪೊಲೀಸರ ಕೈಗೆ ಲಾಕ್ ಆಗಿದೆ.

ಸೈಯದ್ ಪೈರೋಜ್(34) ವರ್ಷ,ಈತ ಶಬ್ಬೀರ್ ಅಹಮ್ಮದ್(25) ವರ್ಷ,ಇನ್ನೂ ಇವ್ನು ತುಫೇಲ್ ಅಂತಾ (23) ವರ್ಷ, ಈತನ ಹೆಸರು ಬರ್ಕತ್(31) ವರ್ಷ.ಬೈಕ್ ಹತ್ತಿ ಬರ್ತಿದ್ದ ಈ ಆಸಾಮಿಗಳು ರಸ್ತೆ ರಸ್ತೆ ಮೇಲೆ ರೌಂಡ್ ಹಾಕ್ತಿದ್ರು.ಕೈಯಲ್ಲಿ ಮೊಬೈಲ್ ಹಿಡಿದು ಹೋಗ್ತಿದ್ದವರು.ಫೋನಲ್ಲಿ ಮಾತನಾಡಿಕೊಂಡು ಹೋಗ್ತಿದ್ದವರನ್ನ ಟಾರ್ಗೆಟ್ ಮಾಡ್ತಿದ್ರು.ಒಂದೇ ಒಂದು ಕ್ಷಣದಲ್ಲಿ ಮಾಲೀಕನ ಕೈಯಲ್ಲಿದ್ದ ಮೊಬೈಲ್ ಆರೋಪಿಗಳ ಕೈ ಸೇರ್ತಿತ್ತು.ಮೊಬೈಲ್ ಕಸಿದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಪರಾರಿಯಾಗಿಬಿಡ್ತಿದ್ರು

ಹೀಗೆ ಕೋರಮಂಗಲ,ಆಡುಗೋಡಿ,ಸುದ್ದಗುಂಟೆಪಾಳ್ಯ,ಅಮೃತಹಳ್ಳಿ,ಹೆಚ್.ಎಸ್.ಆರ್.ಲೇಔಟ್ ಸೇರಿದಂತೆ ಹಲವು ಠಾಣೆ ವ್ಯಾಪ್ತಿಯಲ್ಲಿ ಕೈಚಳಕ ತೋರಿದ್ರು.ಸದ್ಯ ಬಂಧಿತ ನಾಲ್ಕು ಜನರಿಂದ 15 ಲಕ್ಷ ಬೆಲೆಬಾಳುವ 60 ವಿವಿಧ ಕಂಪನಿಯ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಇಂಟರಸ್ಟಿಂಗ್ ವಿಚಾರ ಅಂದ್ರೆ ಎ2 ಆರೋಪಿ ಶಬ್ಬೀರ್ ಮೊದಲು ರೌಡಿಶೀಟರ್ ಒಬ್ಬನ ಜೊತೆಗಿದ್ದ‌.ಆತ ಕೊಲೆ ಕೇಸ್ ನಲ್ಲಿ ಅಂದರ್ ಆಗ್ತಿದ್ದಂತೆ ಶಬ್ಬೀರ್ ರೌಡಿ ಶೀಟರ್ ಪತ್ನಿ ಜೊತೆಗೆ ಹತ್ತಿರವಾಗಿದ್ದ‌. ಹೇಳಿ ಕೇಳಿ ತನ್ನ ಪತ್ನಿಯೊಂದಿಗೆ ಡಿವೋರ್ಸ್ ನೀಡಿದ್ದ ಶಬ್ಬೀರ್ ಸ್ನೇಹಿತ ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಆಕೆಯನ್ನ ರಾಣಿಯಂತೆ ನೋಡಿಕೊಳ್ಳೊ ಶಪಥ ಮಾಡಿದ್ನಂತೆ ಹಾಗಾಗಿ ಮನೆ ಬಾಡಿಗೆ ,ಮೋಜು ಮಸ್ತಿಗಾಗಿ ಮೊಬೈಲ್ ಕಳ್ಳತನ ಹಾದಿ ಹಿಡಿದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರೊ ಮಡಿವಾಳ ಠಾಣೆ ಪೊಲೀಸರು ಮತ್ತಷ್ಟು ಮೊಬೈಲ್ ರಿಕವರಿಗೆ ಮುಂದಾಗಿದ್ದಾರೆ.ಮತ್ತೊಂದೆಡೆ ಸ್ನೇಹಿತನ ಪತ್ನಿಗಾಗಿ ಕಳ್ಳತನ ಹಾದಿಹಿಡಿದವನ ಕೈಗೆ ಕೋಳ ಬಿದ್ದಿದೆ.

RELATED ARTICLES

Related Articles

TRENDING ARTICLES