ಮಂಡ್ಯ : ಕಬ್ಬಿನ FRP ದರ ಹಾಗೂ ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದು, ಪ್ರತಿ ಟನ್ ಕಬ್ಬಿಗೆ 4500 ರೂ ನಿಗದಿ, ಕಬ್ಬಿನ FRP ದರ ಏರಿಕೆ, ಹಾಲಿನ ದರ ಏರಿಕೆಗೆ ಒತ್ತಾಯ ಮಾಡುವ ಹಿನ್ನಲೆಯಲ್ಲಿ ಮಾತು ತಪ್ಪಿದ ಮುಖ್ಯಮಂತ್ರಿ ಸಿಎಂ ವಿರುದ್ದ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಬ್ಬಿನ ಕಾರ್ಖನೆಗಳೆಲ್ಲ ರಾಜ್ಯದ ಮಂತ್ರಿಗಳದೆ. ಪ್ರಧಾನಿ ಮೋದಿ ರೈತರ ಪರ ಇಲ್ಲ, ಅನ್ಯಾಯ ಮಾಡ್ತಿದ್ದಾರೆ. ‘ಪ್ರಧಾನಿ ಮೋದಿ ಬುರಡೇ ನಾಯಕ’ ಬರಿ ಬುರಡೇ ಬುಡುವ ಕೆಲಸವನ್ನ ನರೇಂದ್ರ ಮೋದಿ ಮಾಡ್ತಿದ್ದಾರೆ. ಹಾಲಿನ ದರ ಸಮರ್ಪಕವಾಗಿ ಕೊಡುತ್ತಿಲ್ಲ. ರೈತರಿಗೆ ನ್ಯಾಯ ಸಿಗುವವರೆಗೆ ನಿರಂತರ ದರಣಿ ಮಾಡುತ್ತೇವೆ ಎಂದು, ಸರ್ಕಾರಕ್ಕೆ ರೈತರು ಎಚ್ಚರಿಕೆಯನ್ನು ನೀಡಿದ್ದಾರೆ.