Friday, April 26, 2024

ಸೂರ್ಯ ಗ್ರಹಣದ ಬೆನ್ನಲ್ಲೇ ರಕ್ತ ಚಂದ್ರಗ್ರಹಣ

15 ದಿನ ಅಂತರದಲ್ಲಿ ಎರಡನೇ ಗ್ರಹಣ ಸಂಭವಿಸುತ್ತಿದೆ. ಸೂರ್ಯ ಗ್ರಹಣದ ಬೆನ್ನಲ್ಲೇ ರಕ್ತ ಚಂದ್ರಗ್ರಹಣ ಸಂಭವಿಸ್ತಿರೋದು ಹಲವು ಮಹತ್ವ ಪಡೆದಿದೆ.

ಗ್ರಹಣ ಸಮಯದ ವೇಳೆ ನಗರದ ಹಲವು ದೇವಾಲಯಗಳು ಬಂದ್ ಆಗಲಿದೆ. ಈ ವರ್ಷದ ಕೊನೆಯ ಗ್ರಹಣವು ಮಂಗಳವಾರ ಸಂಭವಿಸಲಿದೆ. ಇದು ಚಂದ್ರಗ್ರಹಣವಾಗಿರಲಿದ್ದು, ಕಳೆದ 15 ದಿನದಲ್ಲಿ ಸಂಭವಿಸುತ್ತಿರುವ 2ನೇ ಗ್ರಹಣವಾಗಿದೆ.

ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುವುದನ್ನು ಚಂದ್ರಗ್ರಹಣ ಎನ್ನುತ್ತಾರೆ. ಈ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಚಂದ್ರನು ಸಂಪೂರ್ಣವಾಗಿ ಮುಚ್ಚಲ್ಪಡುತ್ತಾನೆ.

ಅದೇ ಸಮಯದಲ್ಲಿ, ಚಂದ್ರನು ಭೂಮಿಯ ಸುತ್ತ ಸುತ್ತುತ್ತಾನೆ, ಚಂದ್ರನು ಭೂಮಿಯ ನೆರಳಿನಲ್ಲಿ ಉಳಿಯುವವರೆಗಿನ ಸ್ಥಿತಿಯನ್ನು ನಾವು ಚಂದ್ರಗ್ರಹಣ ಎಂದು ಹೇಳುತ್ತೇವೆ. ನಾಳೆ ರಾಹುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ವಿವಿಧೆಡೆ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

RELATED ARTICLES

Related Articles

TRENDING ARTICLES