Wednesday, January 22, 2025

‘KRSನಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ’, ಬೃಂದಾವನ ಸಂಪೂರ್ಣ ಬಂದ್..!

ಮಂಡ್ಯ:‘KRS ನ ಬೃಂದಾವನ ಸಂಪೂರ್ಣ ಬಂದ್.’ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS. ಕಳೆದ 15 ದಿನದಿಂದ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ.

ಚಿರತೆ ಕಾಟದಿಂದ 8 ದಿನದಿಂದ ಉತ್ತರ ಬೃಂದಾವನ ಬಂದ್ ಮಾಡಿದ್ದ ಅಧಿಕಾರಿಗಳು. ನಿನ್ನೆ ಮತ್ತೆ ಬೃಂದಾವನದ ಟಿಕೆಟ್ ಕೌಂಟರ್ ಸಮೀಪವೇ ಪ್ರತ್ಯಕ್ಷವಾಗಿದೆ.  ನೀರಿನ ವಾಲ್ ತಿರುಗಿಸಲು ಹೋದಾಗ ಚಿರತೆ ನೋಡಿ ಗಾಬರಿಗೊಂಡ ನೌಕರ. ಚಿರತೆ ಮತ್ತೆ ಪ್ರತ್ಯಕ್ಷವಾದ ಸುದ್ದಿ ಕೇಳಿ ಬೃಂದಾವನದಿಂದ ಓಡಿದ ಪ್ರವಾಸಿಗರು.

ಬಳಿಕ ಬೃಂದಾವನ ಸಂಪೂರ್ಣ ಬಂದ್ ಮಾಡಿದ ಅಧಿಕಾರಿಗಳು. ಸತತ ಮೂರನೇ ಬಾರಿ KRS ನ ಬೃಂದಾವನದಲ್ಲಿ ಪ್ರತ್ಯಕ್ಷವಾಗಿರುವ ಚಿರತೆ. ಚಿರತೆ ಸೆರೆಗೆ ಬೋನ್ ಇರಿಸಿದರು ಬೋನಿಗೆ ಬೀಳದ ಚಾಲಾಕಿ ಚಿರತೆ. ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಮತಷ್ಟು ಬೋನ್ ಇರಿಸಿರುವ ಅಧಿಕಾರಿಗಳು. KRS ನಲ್ಲೂ ಚಿರತೆ ಪ್ರತ್ಯಕ್ಷದಿಂದ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧವಾಗಿದೆ.

RELATED ARTICLES

Related Articles

TRENDING ARTICLES