Wednesday, January 22, 2025

ಇಡಿ ವಿಚಾರಣೆಗೆ ಗೈರಾಗಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಇಂದು ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್ ನೀಡಿ​​ ವಿಚಾರಣೆಗೆ ಕರೆದ ಹಿನ್ನಲೆಯಲ್ಲಿ ಇಂದು ಡಿಕೆಶಿ ವಿಚಾರಣೆಗೆ ಹಾಜರಾಗುವುದು ಡೌಟು ಎನ್ನಲಾಗಿದೆ.

ಇಂದು ವಿಚಾರಣೆಗೆ ಗೈರಾಗಲಿರುವ ಡಿಕೆ ಶಿವಕುಮಾರ್ ದೆಹಲಿ ಬದಲು ಬೆಳಗಾವಿಗೆ ತೆರಳಿ ಅಲ್ಲಿಂದ ಮಾಜಿ ಸಚಿವ ವಿನಯ್​ ಕುಲಕರ್ಣಿ ಹುಟ್ಟು ಹಬ್ಬ ನಿಮಿತ್ಯ ಹಮ್ಮಿಕೊಂಡ ಕಿತ್ತೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸೋದರ ಸಂಸದ ಡಿಕೆ ಸುರೇಶ್ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ನಡೆದ ಭಾರತ್​ ಜೋಡೋ ಯಾತ್ರೆ ವೇಳೆ ಇಡಿ ವಿಚಾರಣೆಗೆ ಡಿ.ಕೆ ಶಿವಕುಮಾರ್​ ಅವರನ್ನ ಇಡಿ ಕರೆದು ಶಾಕ್​ ನೀಡಿತ್ತು. ಈಗ ಮತ್ತೆ ಇಡಿ ವಿಚಾರಣೆಗೆ ಡಿಕೆಶಿ ಅವರನ್ನ ಕರೆದಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯ ಇಡಿ ಕಚೇರಿಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು. ಡಿಕೆಶಿ ಬದಲಿಗೆ ಸಂಸದ ಡಿಕೆ ಸುರೇಶ್​ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಬೇರೆ ದಿನಾಂಕದಂದು ಸಮಯ ನೀಡುವಂತೆ ಇ-ಮೇಲ್​ ಮೂಲಕ ಡಿಕೆಶಿ ಇಡಿಗೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES