ಹಾವೇರಿ : ಖರ್ಗೆಯವರ ಆಯ್ಕೆಯಿಂದ ರಾಜ್ಯಕ್ಕೆ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಟೀಕೆ ಮಾಡ್ತಿತ್ತು ತಾಯಿ ಮಕ್ಕಳ ಪಕ್ಷ ಅಂತಾ ಅದಕ್ಕೆ ನಮ್ಮ ಪಕ್ಷ ಉತ್ತರ ಕೊಟ್ಟಿದೆ, ಮೂರು ಸರ್ವೆ ಮಾಡಲಾಗಿದೆ, ಡಿಸೆಂಬರ್ ಒಳಗೆ 150 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ, ಪಾಪದ ಕೊಡ ತುಂಬಿದೆ ಎಂದರು.
ಇನ್ನು, ಬಿಜೆಪಿ ಜನಸಂಕಲ್ಪ ಯಾತ್ರೆ ಮಾಡುವ ಬದಲು ಹಣ ಸಂಗ್ರಹ ಯಾತ್ರೆ ಮಾಡುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಈ ಸರಕಾರಕ್ಕೆ ನಾಚಿಕೆಯಾಗಬೇಕು. ಈ ಸರಕಾರದ ಸಮಯ ಮುಗಿದಿದೆ. ನಮ್ಮ ಸರಕಾರದ ಬಗ್ಗೆ ನಿಮ್ಮ ಸರಕಾರದ ಬಗ್ಗೆ ತನಿಖೆ ಮಾಡಿ. ನಿಮಗೆ ದೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿ ನಮಗೇನು ಹೆದರಿಕೆಯಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕ, ನಿಮ್ಮ ಭ್ರಷ್ಟಾಚಾರದ ಬಗ್ಗೆ ಇಡಿ ದೇಶ ಮಾತನಾಡುತ್ತಿದೆ ಎಂದು ಹೇಳಿದರು.