Thursday, December 19, 2024

ಅಪ್ಪು ಆಶಯಕ್ಕಾಗಿ ‘ಗಂಧದಗುಡಿ’ಗೆ ದೊಡ್ಮನೆಯಿಂದ ಆಫರ್​​​​

ಪೃಕೃತಿ ಮಾತೆಯ ಅದ್ಭುತ ಕಥೆಯನ್ನು ಅಮೋಘವಾಗಿ ತೋರಿಸಲಾಗಿದ್ದ ಸಿನಿಮಾ ಗಂಧದಗುಡಿ. ಪುನೀತ್​​ ರಾಜ್​ಕುಮಾರ್​ ಡ್ರೀಮ್​ ಪ್ರಾಜೆಕ್ಟ್​ಗೆ ಫಿದಾ ಆಗಿದ್ದ ಪ್ರೇಕ್ಷಕರಿಗೆ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಡೋಂಟ್​ ಮಿಸ್​ ಗಂಧದಗುಡಿ ಸಿನಿಮಾ ಅನ್ನೋ ಕೂಗು ಕೇಳಿ ಬರ್ತಿದೆ. ಯೆಸ್​.. ಅಶ್ವಿನಿ ಪುನೀತ್​ ರಾಜ್​ಕುಮಾರ್​​ ಕೊಟ್ಟ ಆ ಆಫರ್​ ಏನು ಅಂತೀರಾ..? ನೀವೇ ಓದಿ.

  • ಟಿಕೆಟ್​ ದರದಲ್ಲಿ ಬಂಪರ್ ವಿನಾಯ್ತಿ.. ಆಫರ್​ ಕ್ಲೋಸಸ್​ ಸೂನ್​

ಪವರ್​ ಸ್ಟಾರ್​ ಪುನೀತ್ ರಾಜ್​​ಕುಮಾರ್​ ಅವ್ರ ಕನಸಿನ ಕೂಸಾಗಿದ್ದ ಗಂಧದಗುಡಿ ಸಿನಿರಸಿಕರು ಬಹುಪರಾಕ್​ ಎಂದಿದ್ದಾರೆ. ಕೊನೆಯ ಸಿನಿಮಾ ಗಂಧದಗುಡಿಯನ್ನು ತಲೆ ಮೇಲೆ ಹೊತ್ತು ಮೆರೆಸಿದ್ದಲ್ಲದೆ ಚಿತ್ರಕ್ಕೆ ಫುಲ್​ ಮಾರ್ಕ್ಸ್​​ ಕೊಟ್ಟಿದ್ದಾರೆ. ಇದೀಗ ಎಲ್ಲಾ ವಯೋಮಾನದ ಪ್ರೇಕ್ಷಕರಿಗೊಂದು ಗುಡ್​ ನ್ಯೂಸ್​ ಸಿಕ್ಕಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್​ ಥಿಯೇಟರ್​ ಮಾಲೀಕರು ಹಾಗೂ ವಿತರಕರ ಜೊತೆ ಖುದ್ದಾಗಿ ಮಾತನಾಡಿ ಬಂಪರ್​ ಆಫರ್  ಕೊಟ್ಟಿದ್ದಾರೆ.

ಗಂಧದಗುಡಿ ಚಿತ್ರದಲ್ಲಿ ಪರಿಸರ ನಾಶದ ವಿರುದ್ಧ ಅತ್ಯಂತ ಕಾಳಜಿಯಿಂದ ಅಪ್ಪು ಮೆಸೇಜ್​ ಕೊಟ್ಟಿದ್ದಾರೆ. ಈ ಸಿನಿಮಾ ಎಲ್ಲರಿಗೂ ರೀಚ್​ ಆಗ್ಬೇಕು ಅನ್ನೋ ಉದ್ದೇಶದಿಂದ ಟಿಕೆಟ್​ ದರವನ್ನು ಇಳಿಸಲಾಗಿದೆ. ಮಕ್ಕಳ ಪಾಲಿಗೆ ದೃಶ್ಯವೈಭವದ ಕಥಾನಕ ಇದಾಗಿದ್ದು ಡಿಸ್ಕವರಿ, ಅನಿಮಲ್​ ಪ್ಲಾನೆಟ್​ ಕಾಲದಲ್ಲೂ ಎಲ್ಲರ ಮನ ತಣಿಸುವ ಚಿತ್ರಕಥೆ ಇದಾಗಿದೆ. 07:11:2022  ಸೋಮವಾರದಿಂದ 10:11:2022 ಗುರುವಾರದವರೆಗೂ ಈ ಭರ್ಜರಿ ಆಫರ್​​ ನಿಮ್ಮದಾಗಲಿದೆ.

  • ಸಿಂಗಲ್ ಸ್ಕ್ರೀನ್ 56 ರೂ.. ಮಲ್ಟಿಪ್ಲೆಕ್ಸ್ ಗಳಲ್ಲಿ 112 ರೂ
  • ದೊಡ್ಮನೆ ಫ್ಯಾಮಿಲಿ ಕಡೆಯಿಂದ ಸಾಮಾಜಿಕ ಕಳಕಳಿ

ಪಿಆರ್​ಕೆ ಪ್ರೊಡಕ್ಷನ್​ ವತಿಯಿಂದ ಅಧಿಕೃತವಾಗಿ ಈ ಮೆಗಾ ಆಫರ್​ ಅನೌನ್ಸ್​ ಆಗಿದ್ದು, ಅಭಿಮಾನಿಗಳು ಫುಲ್ ದಿಲ್​ ಖುಷ್ ಆಗಿದ್ದಾರೆ. ವನ್ಯ ಮಾತೆಯ ಸಿರಿ ಸಂಪತ್ತಿನ ಜೊತೆಗೆ ಕರ್ನಾಟಕದಲ್ಲಿ ಕಂಡಿರದ ಕೆಲವು ಅದ್ಭುತ ತಾಣಗಳನ್ನು ಗಂಧದಗುಡಿ ಸಿನಿಮಾದಲ್ಲಿ ತೋರಿಸಲಾಗಿತ್ತು.

ಇದೀಗ ಪ್ರಕೃತಿಯ ವೈಭವವನ್ನು ಇನ್ನಷ್ಟು ಕಡಿಮೆ ದರದಲ್ಲಿ ಕಣ್ತುಂಬಿಕೊಳ್ಳಬಹುದು. ಸಿಂಗಲ್​ ಸ್ಕ್ರೀನ್​​​​ ಚಿತ್ರಮಂದಿರಗಳಲ್ಲಿ ಕೇವಲ 56 ರೂಪಾಯಿ ಹಾಗೂ ಮಲ್ಟಿಫ್ಲೆಕ್ಸ್​ ಥಿಯೇಟರ್​ಗಳಲ್ಲಿ 112 ರೂಪಾಯಿ ಮಾತ್ರ ದರ ನಿಗದಿಪಡಿಸಲಾಗಿದೆ.

ಮಕ್ಕಳು, ಹಿರಿಯರು, ವೃದ್ಧರು ಎಲ್ಲರೂ ತಪ್ಪದೇ ನೋಡಬಹುದಾದ ಸಿನಿಮಾ ಇದಾಗಿದ್ದು, ಈ ನಾಲ್ಕು ದಿನಗಳ ಸೀಮಿತ ಪ್ರದರ್ಶನಗಳಿಗೆ ಈ ವಿನಾಯ್ತಿ ನಿಗದಿಪಡಿಸಲಾಗಿದೆ. ಈ ಕುರಿತಾಗಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಫರ್​​ ಕ್ಲೋಸಸ್​ ಸೂನ್​​. ಯಾರೆಲ್ಲಾ ಸಿನಿಮಾ ನೋಡಿಲ್ಲವೋ, ಈಗ್ಲಾದ್ರೂ ಮಿಸ್​ ಮಾಡದೇ ನೋಡಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES