Monday, December 23, 2024

ಮುರುಘಾ ಶ್ರೀ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್​ ಶೀಟ್​ನಲ್ಲಿ ಭಯಾನಕ ಮಾಹಿತಿ.!

ಚಿತ್ರದುರ್ಗ; ಲೈಂಗಿಕ ದೌರ್ಜನ್ಯ ಅಡಿ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಶಾಲಾ ಮಕ್ಕಳಿಗೆ ವಿವಿಧ ಆಸೆಗಳನ್ನ ತೋರಿಸಿ ಮುರುಘಾ ಶ್ರೀಗಳು ನಮ್ಮನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಕೆಲವು ತಿಂಗಳ ಹಿಂದೆ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸಂಸ್ಥೆ ಜತೆ ಸೇರಿ ಶ್ರೀಗಳ ವಿರುದ್ಧ ದೂರು ಸಲ್ಲಿಸುವಾಗ ಈ ಆರೋಪ ಮಾಡಿದ್ದರು.

ಬಳಿಕ ಮುರುಘಾ ಸ್ವಾಮೀಜಿ ಬಂಧಿಸಿಲಾಯಿತು. ಈ ಕೇಸ್​ನಲ್ಲಿ A1 ಆರೋಪಿ ಮುರುಘಾ ಸ್ವಾಮಿ, A2 ಲೇಡಿ ವಾರ್ಡನ್ (ರಶ್ಮಿ), A 4 ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಪೊಲೀಸರು 694 ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇನ್ನು ಇದ್ರಲ್ಲಿ ಭಾಗಿಯಾದ A 3 ಮಠದ ಉತ್ತರಾಧಿಕಾರಿ , A 5 ಆರೋಪಿ ವಕೀಲ ಗಂಗಾಧರಯ್ಯ ಭಾಗಿ ಆಗಿರುವ ಮಾಹಿತಿ ಇಲ್ಲ.

ಲೇಡಿ ವಾರ್ಡನ್ ಮೂಲಕ ಕರೆಸಿ ನಿರಂತರ ಲೈಂಗಿಕ ದೌರ್ಜನ್ಯ ಮುರುಘಾ ಸ್ವಾಮಿ ನಡೆಸಿದ್ದಾರೆ. ಈ ವೇಳೆ ಬರುವ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳ ಬಳಕೆ. ಕಚೇರಿ, ಬೆಡ್ ರೂಂ, ಬಾತ್ ರೂಂ ಗೆ ಕರೆದೊಯ್ದು ಬಲತ್ಕಾರ. ವಿರೋಧಿಸಿದರೆ ಜೀವ ಬೆದರಿಕೆ, ಲೇಡಿ ವಾರ್ಡನ್ ರಿಂದ ಶಿಕ್ಷೆ ನೀಡಲಾಗಿದೆ ಎಂದು ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್​ನಲ್ಲಿ ಈ ಮಾಹಿತಿ ಇವೆ.

ಇನ್ನು ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಇದ್ದು, ಕೆಲ ವರ್ಷದ ಹಿಂದೆ ಓರ್ವ ಬಾಲಕಿಯ ರೇಪ್ & ಮರ್ಡರ್ ಮಾಡಲಾಗಿದೆ. ಸಂತ್ರಸ್ತ ಬಾಲಕಿಯರ ಹೇಳಿಕೆ ಆಧರಿಸಿ ಪೊಲೀಸರ ತನಿಖೆ ನಡೆಸಿಲಾಗಿದೆ. ಆಂಧ್ರದ ಬಾಲಕಿ ಮಠದ ಹಾಸ್ಟೆಲ್ ನಲ್ಲಿದ್ದಳು. ಆಂಧ್ರಕ್ಕೆ ತೆರಳಿದ್ದ ವೇಳೆ ಅಪಘಾತದಲ್ಲಿ ಸಾವು‌, ಮಾಹಿತಿ ಪೊಲೀಸರು ಕಲೆ ಹಾಕಿದ್ದಾರೆ.

ಇನ್ನು ಈ ಸಂಬಂಧ ಮಠದ ಹಾಸ್ಟೆಲ್ ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದ್ದು, ಸಂತ್ರಸ್ತರ ಹೇಳಿಕೆ ಅಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿರುವ ಅಂಶಗಳೇನು?

1. ಮುರುಘಾ ಶ್ರೀಗಳು ತನ್ನ ಬಳಿಗೆ ಇಬ್ಬರು ಹುಡುಗಿಯರನ್ನು ಕಳುಹಿಸುವಂತೆ ಚೀಟಿ ಕಳುಹಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. ಶ್ರೀ ಹೇಳಿದ ಇಬ್ಬರು ಹುಡುಗಿಯರನ್ನು ಶ್ರೀಗಳ ಬಳಿ ವಾರ್ಡ್‌ನ್ ರಶ್ಮಿ ಕಳುಹಿಸುತ್ತಿದ್ದಳು.

2. ಟ್ಯೂಷನ್ ಮಾಡುವದಾಗಿ ಭಾನುವಾರ ಸಂಜೆ ವಿದ್ಯಾರ್ಥಿನಿಯರನ್ನು ಮುರುಘಾ ಶರಣರು ಕರೆಸಿಕೊಳ್ಳುತ್ತಿದ್ದರು. ಟ್ಯೂಷನ್ ಮುಗಿದ ನಂತರ ಇಬ್ಬರು ಹುಡುಗಿಯರನ್ನು ಅಲ್ಲಿಯೇ ಉಳಿಸಿಸಕೊಳ್ಳುತ್ತಿದ್ದರು. ಕಸ ಹೊಡೆಯಬೇಕು ಎಂದು ವಿದ್ಯಾರ್ಥಿನಿಯರನ್ನು ಇರಿಸಿಕೊಳ್ಳುತ್ತಿದ್ದ ಶ್ರೀಗಳು .

3. ವಿದ್ಯಾರ್ಥಿನಿಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫೂಟ್ಸ್ ಕೊಡುತ್ತಿದ್ದ ಮುರುಘಾ ಶ್ರೀ. ಈ ವೇಳೆ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ತಾನು ಬೆತ್ತಲ್ಲಾಗಿ  ವಿದ್ಯಾರ್ಥಿನಿಯರ ಸೊಂಟವನ್ನು ಮುಟ್ಟುತ್ತಿದ್ದರು. ನಮ್ಮ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿದ ಬಗ್ಗೆ ಪೊಲೀಸರಿಗೆ ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ.

4. ನನ್ನ ಎದುರಿಗೆ ಮಧ್ಯಪಾನ ಮಾಡಿ ಅವಾಚ್ಯವಾಗಿ ನಿಂದಿಸಿದ್ರು. ಪ್ರತಿದಿನ ವಾರ್ಡನ್ ರಶ್ಮಿಗೆ ವಿದ್ಯಾರ್ಥಿನಿಯರ ಹೆಸರು ಬರೆದು ಕಳುಹಿಸುತ್ತಿದ್ದ ಶ್ರೀಗಳು. ಚೀಟಿಯಲ್ಲಿದ್ದ ಹೆಸರಿನ ಯುವತಿರನ್ನು ಶ್ರೀಗಳ ಬಳಿಗೆ ಕಳುಹಿಸತ್ತಿದ್ದ ವಾರ್ಡನ್​ ರಶ್ಮಿ.

RELATED ARTICLES

Related Articles

TRENDING ARTICLES