Monday, December 23, 2024

ನಾಳೆ ರಾಹುಗ್ರಸ್ತ ಚಂದ್ರಗ್ರಹಣ : ಶಿರಸಿ ಮಾರಿಕಾಂಬ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ

ಶಿರಸಿ : ನಾಳೆ ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಶಿರಸಿಯ ಮಾರಿಕಾಂಬ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.

ನಾಳೆ ಬೆಳಗ್ಗೆ 8 ಗಂಟೆಗೆ ಮಹಾಪೂಜೆ ನೆರವೇರಿಸಿ ದೇಗುಲ ಬಂದ್ ಆಗಲಿದೆ ಹೀಗಾಗಿ ಭಕ್ತರು ಸಹಕರಿಸುವಂತೆ ದೇವಸ್ಥಾನ ಮಂಡಳಿ ಮನವಿ ಮಾಡಿದ್ದಾರೆ. ಸಂಜೆ 6.30ಕ್ಕೆ ದೇವಸ್ಥಾನ ಬಾಗಿಲು ತೆರೆದು ಶುದ್ದಿ ಕಾರ್ಯ ಜರುಗಲಿದ್ದು, ರಾತ್ರಿ 9 ಗಂಟೆಯ ಮಹಾಪೂಜೆ ನಂತರ ಭಕ್ತರಿಗೆ ದರ್ಶನ ಭಾಗ್ಯ ನೀಡಲಿದ್ದಾರೆ.

ಇನ್ನು, ಗೋಕರ್ಣದ ಮಹಾಬಲೇಶ್ವರನಿಗೂ ತಟ್ಟಿದ ಗ್ರಹಣ ಎಫೆಕ್ಟ್ ಮಹಾಬಲೇಶ್ವರ ದೇಗುಲದಲ್ಲಿ ದರ್ಶನದ ವೇಳೆ ಬದಲಾವಣೆಯಾಗಿದೆ. ಮಧ್ಯಾಹ್ನ 2.30 ರಿಂದ ಸಂಜೆ 6:30ರವರೆಗೆ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ, ಮಧ್ಯಾಹ್ನ ಹಾಗೂ ಸಂಜೆ ಪ್ರಸಾದ ವ್ಯವಸ್ಥೆ ಇಲ್ಲ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ಪ್ರಸಾದ ಸೇವೆ ಇರುವುದಿಲ್ಲ ಹೀಗಾಗಿ ಭಕ್ತರು ಸಹಕರಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

Related Articles

TRENDING ARTICLES