Wednesday, January 22, 2025

ಚಾಮರಾಜನಗರ: ಬೈಕ್ ಗೆ ಟೆಂಪೋ ಡಿಕ್ಕಿ ಇಬ್ಬರು ಎಎಸ್ಐಗೆ ತೀವ್ರ ಗಾಯ

ಚಾಮರಾಜನಗರ: ಬೈಕ್ ಗೆ ಟೆಂಪೋ ಡಿಕ್ಕಿ ಇಬ್ಬರು ಎಎಸ್ಐಗೆ ತೀವ್ರ ಗಾಯಗೊಂಡಿದ್ದಾರೆ. ಬೈಕ್ ‌ನಲ್ಲಿ ತೆರಳುತ್ತಿದ್ದ ಇಬ್ಬರು ಎಎಸ್ಐ ಗಳಿಗೆ ಅಪಘಾತವಾಗಿದೆ.

ಏಕಾಏಕಿ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಎಸ್‌ಐಗಳಿಗೆ ಗಂಭೀರ ಗಾಯ. ಭಾನುವಾರ ರಾತ್ರಿ ನಡೆದಿರುವ ಘಟನೆ.
ಚಾಮರಾಜನಗರ ತಾಲೂಕು ಉಡಿಗಾಲದ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ ಐ ಮಲ್ಲಿಕಾರ್ಜುನ ಹಾಗು ತೆರಕಣಾಂಬಿ ಎಎಸ್ ಐ ಮಹದೇವಸ್ವಾಮಿ ಗಾಯಗೊಂಡವರು.

ಗಾಯಗೊಂಡ ಎಎಸ್ಐಗಳನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES