Thursday, December 26, 2024

ರಸ್ತೆಗುಂಡಿ ಮುಚ್ಚುವಂತೆ ಆಗ್ರಹಿಸಿ ಶಾಸಕರ ವಿಭಿನ್ನ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದ ನಗರದ ರಸ್ತೆ ಯಮಸ್ವರೂಪಿ ಗುಂಡಿಗಳು,
ದೇವನಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳೆಲ್ಲಾ ಗುಂಡಿಮಯವಾಗಿದೆ.

ರಸ್ತೆ ಗುಂಡಿಗಳಲ್ಲಿ ವಾಹನ ಸವಾರರು ಹೈರಾಣು ಪಡುತ್ತಿದ್ದು, ಗುಂಡಿಗೆ‌ ಬಿದ್ದು ಹಲವು ವಾಹನ ಸವಾರರು ಗಾಯಗೊಂಡ ಹಿನ್ನಲೆಯಲ್ಲಿ,
ರಸ್ತೆ ಡಾಂಬರು ಹಾಕುವಂತೆ ಹಲವು ಭಾರಿ ಸರ್ಕಾರಕ್ಕೆ ಸ್ಥಳೀಯ ಶಾಸಕರ ಈಗಾಗಲೇ ಮನವಿ ಮಾಡಿದ್ದಾರೆ. ಗುಂಡಿ ರಸ್ತೆಯನ್ನ ಸರಿಪಡಿಸಲು ಸರ್ಕಾರ ಮೀನಾಮೇಷ ಮಾಡುತ್ತಿದ್ದು, ರಸ್ತೆಯನ್ನ ಸರಿಪಡಿಸುವಂತೆ ಒತ್ತಾಯಿಸಿ ಸ್ಥಳೀಯ ಶಾಸಕರಿಂದ ವಿಭಿನ್ನ ಹೋರಾಟ ನಡೆಸಿದ್ದಾರೆ.

ದೇವನಹಳ್ಳಿ ಪಟ್ಟಣದ ಗುಂಡಿಗಳಲ್ಲಿ ಪೈರು ನಾಟಿ ಮಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಯಮಸ್ವರೂಪಿ ಗುಂಡಿಗಳಲ್ಲಿ ಪೈರು ನಾಟಿ ಮಾಡಿ ಸರ್ಕಾರದ ವಿರುದ್ದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಜೆಡಿಎಸ್ ಕಾರ್ಯಕರ್ತರಿಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಬಸ್​ಸ್ಟಾಪ್​ನ ರಸ್ತೆ ಗುಂಡಿಗಳಲ್ಲೆ ಕುಳಿತ ಶಾಸಕ ನಿಸರ್ಗ ನಾರಾಯಣಸ್ವಾಮಿ,
ಪಟ್ಟಣದಿಂದ ಹೊಸಕೋಟೆ, ಬೆಂಗಳೂರು ಕಡೆ ಹೋಗುವ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಟೆಂಡರ್ ನೀಡಿದ್ದರು, ಸರ್ಕಾರ ಅದನ್ನು ರದ್ದು ಮಾಡಿದೆ ಅಂತಾ ಶಾಸಕರು ಗರಂ ಆಗಿದ್ದಾರೆ.

RELATED ARTICLES

Related Articles

TRENDING ARTICLES