Wednesday, January 22, 2025

ಗಂಡನ ಕಿರುಕುಳ ತಾಳಲಾರದೆ 8 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ.!

ನೆಲಮಂಗಲ; ಗಂಡನ ಕಿರುಕುಳಕ್ಕೆ ಮನನೊಂದು ಎಂಟು ತಿಂಗಳ ತುಂಬು ಗರ್ಭಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ನಡೆದಿದೆ.

ಸೌಂದರ್ಯ (19) ಮೃತ ಗರ್ಭಿಣಿ, ಕಳೆದ ಮೂರು ದಿನದ ಹಿಂದೆ ಮೃತ ಸೌಂದರ್ಯಗೆ ಸೀಮಂತ ಕಾರ್ಯಕ್ರಮ ನಡೆಸಲಾಗಿತ್ತು. ತಾನು ಕೆಲಸ ಮಾಡುತ್ತಿದ್ದ ಗ್ರಾರ್ಮೆಂಟ್ಸ್‌ನವರು ಸೇರಿ ಸೌಂದರ್ಯ ಅವರಳ ಸೀಮಂತವನ್ನ ಮಾಡಲಾಗಿತ್ತು. ಆದರೆ, ಸೌಂದರ್ಯ ಪತಿ ಸಂತೋಷ್ ವಿರುದ್ದ ಕೊಲೆ ಆರೋಪವನ್ನ ಮೃತಳ ಕುಟುಂಬಸ್ಥರು ಮಾಡುತ್ತಿದ್ದಾರೆ.

ಕಳೆದ 9 ತಿಂಗಳ ಹಿಂದೆ ಸಂತೋಷ್‌ ಹಾಗೂ ಸೌಂದರ್ಯ ಪ್ರೀತಿಸಿ ಮನೆಯವರಿಗೆ ತಿಳಿಸದೇ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಸದ್ಯ ಆರೋಪಿ ಸಂತೋಷ್ ಮಾದನಾಯಕನಹಳ್ಳಿ ಪೊಲೀಸರ ವಶಕ್ಕೆ ನೀಡಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕ್ರರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES