Wednesday, December 25, 2024

1108 ದಂಪತಿಗಳಿಂದ ವಿಶೇಷ ಗೋಪೂಜಾ ಕಾರ್ಯಕ್ರಮ..!

ತುಮಕೂರು:ತುಮಕೂರು ತಾಲೂಕಿನ ಚಿಕ್ಕತೊಟ್ಲುಕೆರೆ ಅಟವಿ ಸುಕ್ಷತ್ರದಲ್ಲಿಂದು ಪರಮ ತಪಸ್ವೀ ಲಿಂಗೈಕ್ಯ ಅಟವೀ ಮಹಾ ಶಿವಯೋಗಿಗಳವರ 112 ನೇ ಪುಣ್ಯ ಸ್ಮರಣೆ ಹಿನ್ನೆಲೆ 1108 ದಂಪತಿಗಳಿಂದ ಗೋ ಪೂಜಾ ಕಾರ್ಯಕ್ರಮವನ್ನು ಮಠದ ಪೀಠಾಧ್ಯಕ್ಷರಾದ ಶ್ರೀ ಅಟವಿ ಶಿವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.

1108 ದಂಪತಿಗಳಿಂದ ವಿಶೇಷ ಗೋಪೂಜಾ ಕಾರ್ಯಕ್ರಮ ನೆರವೇರಿದೆ. ಇನ್ನೂ ಗೋ ಪೂಜೆಗೂ ಮುನ್ನ ಮಠದ ಆವರಣದಲ್ಲಿ ನೂತನ ಗೋಶಾಲೆಯನ್ನು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದ್ರು ಬಳಿಕ ಮಠದ ಆವರಣಕ್ಕೆ ಆಗಮಿಸಿದ ದಂಪತಿಗಳಿಂದ 108 ಗೋ ಮಂಟಪಗಳಲ್ಲಿ 1108 ದಂಪತಿಗಳಿಂದ ವಿಶೇಷವಾಗಿ ಗೋ ಪೂಜಾ ಕಾರ್ಯಕ್ರಮವನ್ನು ನೇರವೇರಿಸಲಾಯಿತು.

ಗೋ ಪೂಜೆಯಿಂದಾಗಿ 33 ಸಾವಿರ ದೇವರುಗಳ ಪೂಜೆ ಮಾಡಿದಷ್ಟು ಫಲ ದೊರೆಯುತ್ತದೆ, ಹಾಗೂ ಜಗತ್ತಿನಾದ್ಯಂತ ವಿಶ್ವಶಾಂತಿ ಉಂಟಾಗುತ್ತದೆ ಎಂಬ ದೃಷ್ಟಿಯಿಂದ ಅಟವಿ ಶಿವಲಿಂಗ ಮಹಾಸ್ವಾಮೀಜಿಗಳ ಸಂಕಲ್ಪದಂತೆ ಗೋಪೂಜಾ ಕಾರ್ಯಕ್ರಮವನ್ನು ನೇರವೇರಿಸಲಾಗಿದ್ದು ಇಂದು ರಾತ್ರಿ ಲಕ್ಷದೀಪೋತ್ಸವ ಕಾರ್ಯಕ್ರಮವಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಟವೀಶನ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.

 

RELATED ARTICLES

Related Articles

TRENDING ARTICLES