ಬೆಂಗಳೂರು: ಕಳೆದ 7 ತಿಂಗಳ ಹಿಂದೆ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಆರೋಪಿ ನಾಗೇಶ್ ಕಾಲು ಕೊಳೆತ(ಗ್ಯಾಂಗ್ರಿನ್) ಸ್ಥಿತಿಯ ಲಕ್ಷಣ ಕಾಣುತ್ತಿದೆ. ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆ ಕಾಡುತ್ತಿದೆ. ಸದ್ಯ ನಾಗನ ಕಾಲಲ್ಲಿ ಗ್ಯಾಂಗ್ರಿನ್(ಕೊಳೆತ) ಲಕ್ಷಣ ಕಾಣ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಬಗ್ಗೆ ಆ್ಯಸಿಡ್ ದಾಳಿ ಸಂತ್ರಸ್ಥೆ ಯುವತಿ ಮಾತನಾಡಿ, ವಿಚಾರ ಕೇಳಿ ತುಂಬ ಖಷಿ ಆಗ್ತಿದೆ. ದೇವರೇ ಶಿಕ್ಷೆ ಕೊಟ್ಟಿದ್ದಾನೆ. ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕು. ಯಾವ ಹುಡುಗಿಯರಿಗೂ ಈ ರೀತಿ ಆ್ಯಸಿಡ್ ದಾಳಿ ಆಗಬಾರದು. ಆಸ್ಪತ್ರೆಯಲ್ಲಿ ಮೂರು ತಿಂಗಳು ನೋವಲ್ಲಿದ್ದೆ, ಇವತ್ತು ವಿಚಾರ ಗೊತ್ತಾಗಿ ಖಷಿಯಾಯಿತು ಎಂದಿದ್ದಾಳೆ.
ಇನ್ನು ನನಗೆ ಆ್ಯಸಿಡ್ ದಾಳಿ ಮಾಡಿದ ಆತನ ಮೈಯೆಲ್ಲ ಕೊಳೆತೋಗಬೇಕು, ನನಗೆ ಆದ ನೋವು ಅವನಿಗೆ ಗೊತ್ತಾಗಬೇಕು. ಬರೀ ಒಂದು ಕಾಲಲ್ಲ, ಕಾನೂನು ಪ್ರಕಾರ ಶಿಕ್ಷೆ ಕೊಡಬೇಕು. ನನಗೆ ದೇವರ ಮೇಲೆ ನಂಬುಕೆ ಇದೆ, ದೇವರೇ ಶಿಕ್ಷೆ ನೀಡಿದ್ದಾನೆ. ನನ್ನ ಮೈಯೆಲ್ಲ ಗಾಯವಾದ್ರು ಗುಣಮುಖರಾಗಿ ಎದ್ದು ಬಂದಿದ್ದೀನಿ. ಆತನಿಗೆ ಒಂದು ಕಾಲು ಗ್ಯಾಂಗ್ರಿನ್ ಆಗ್ತಿದ್ರು ನಡೆಯೋಕೆ ಆಗ್ತಿಲ್ಲ ಎಂದು ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಮಾತನಾಡಿದ್ದಾಳೆ.
ಏಪ್ರಿಲ್ 28 ರಂದು ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ಕಚೇರಿ ಬಳಿ ಯುವತಿ ಮೇಲೆ ಆ್ಯಸಿಡ್ ಹಾಕಿ ನಾಗೇಶ್ ಪರಾರಿಯಾಗಿದ್ದ. ಬಳಿಕ ಬೆಂಗಳೂರು ಪೊಲೀಸರು ತಮಿಳುನಾಡಿನ ಆಶ್ರಮದಲ್ಲಿ ಬಂಧಿಸಿ ಕರೆತಂದಿದ್ದರು.