Wednesday, January 22, 2025

ಸಂಜೆ ತುಳಸಿ ಪೂಜೆ ಮಾಡಿದ್ಲು, ರಾತ್ರಿ ವೇಳೆ ನೇಣಿಗೆ ಶರಣಾದ ಖ್ಯಾತ ವೈದ್ಯೆಯ ಸೊಸೆ.!

ಶಿವಮೊಗ್ಗ: ಆಕೆ ನಿನ್ನೆ ಸಂಜೆ ತುಳಸಿ ಪೂಜೆಯಲ್ಲಿ ಪಾಲ್ಗೊಂಡಿದ್ದಳು. ಅರಿಶಿಣ, ಕುಂಕುಮ ತೆಗೆದುಕೊಂಡು ಸದಾ ಸುಮಂಗಲಿಯಾಗಿರ್ತಿನಿ ಅಂತಾ ಆಶೀರ್ವಾದ ಪಡೆದಿದ್ಲು. ಆದ್ರೆ, ವಿಧಿಯ ಆಟವೋ ಏನೋ ಗೊತ್ತಿಲ್ಲ. ಸಂಜೆ ಲವಲವಿಕೆಯಿಂದ ಇದ್ದವಳು, ರಾತ್ರಿ ಹೆಣವಾಗಿ ಬಿಟ್ಟಿದ್ದಾಳೆ. ಯಾವ ಕಾರಣವೋ ಏನೋ ಸುಮಂಗಲಿಯಾಗಿಯೇ ನೇಣಿಗೆ ಕೊರಳೊಡ್ಡಿದ್ದಾಳೆ. ಕೇವಲ 5 ತಿಂಗಳ ಹಿಂದಷ್ಟೇ ಮದುವೆಯಾಗಿ, ಹಲವಾರು ಕನಸು ಕಾಣುತ್ತಾ, ಫುಲ್ ಬಿಂದಾಸ್ ಆಗಿದ್ದ ನವ್ಯಶ್ರೀ ಈಗ ಇಲ್ಲವಾಗಿದ್ದಾಳೆ. ವಿಧಿಯ ಆಟಕ್ಕೆ ನವಶ್ರೀ ಕೊರಳೊಡ್ಡಿದ್ದಾಳೆ.

ನೇಣಿಗೆ ಶರಣಾದ ಹೆಸರು ನವ್ಯಶ್ರೀ ಅಂತಾ. ಶಿವಮೊಗ್ಗದ ಖ್ಯಾತ ವೈದ್ಯೆ ಡಾ. ಜಯಶ್ರೀ ಅವರ ಸೊಸೆ. ಕೇವಲ ಐದು ತಿಂಗಳ ಹಿಂದೆಯಷ್ಟೇ ಜಯಶ್ರೀ ಅವರ ಪುತ್ರ ಆಕಾಶ್ ಜೊತೆ ವಿವಾಹವಾಗಿದ್ದ ನವ್ಯಶ್ರೀ, ಇದ್ದಕ್ಕಿದ್ದಂತೆ, ದಿಢೀರನೇ, ನಿನ್ನೆ ರಾತ್ರಿ ನೇಣಿಗೆ ಕೊರಳೊಡ್ಡಿದ್ದಾಳೆ. ಅಶ್ವಥ್ ನಗರದಲ್ಲಿ ವಾಸವಾಗಿದ್ದ ನವ್ಯಶ್ರೀ, ನಿನ್ನೆ ಕೆಲವು ಮನೆಗಳಿಗೆ ತುಳಸಿ ಪೂಜೆಗೂ ಹೋಗಿ ಬಂದಿದ್ಲಂತೆ. ಪೂಜೆಗೆ ತೆರಳಿ ಅರಿಶಿಣ ಕುಂಕುಮ ಪಡೆದು ಬಂದ ನವ್ಯಶ್ರೀ, ಲವಲವಿಕೆಯಿಂದಲೇ ಇದ್ದು ದಿಢೀರನೇ ಸಾವಿನ ಬಾಗಿಲು ತಟ್ಟಿದ್ದಾಳೆ. ಮನೆಯ ಕಾರ್ ಶೆಡ್ ನಲ್ಲಿ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ಇದು ಅನುಮಾನಕ್ಕೆ ಕಾರಣವಾಗಿದೆ.

ಇನ್ನು ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನವ್ಯಶ್ರೀ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದು, ಇದು ಆತ್ಮಹತ್ಯೆಯೋ, ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಕೇವಲ 5 ತಿಂಗಳ ಹಿಂದೆಯಷ್ಟೇ ಆಕಾಶ್ ಎಂಬುವರನ್ನು ವಿವಾಹವಾಗಿದ್ದ ನವ್ಯಶ್ರೀ, ನಿನ್ನೆ ರಾತ್ರಿ ತುಳಸಿ ಪೂಜೆ ಮಾಡಿ, ಅಕ್ಕಪಕ್ಕದ ಮನೆಗಳಲ್ಲಿ, ಅರಿಶಿಣ-ಕುಂಕುಮ ಸ್ವೀಕರಿಸಿ, ಬಂದಿದ್ದಳಂತೆ. ಬಳಿಕ ಏನಾಯ್ತು ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ.

ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಸಹ ನಡೆಸಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ, ವೈದ್ಯೆ ಡಾ. ಜಯಶ್ರೀ ಅವರ ಪತಿ ಸಹ ನೇಣಿಗೆ ಶರಣಾಗಿದ್ದರಂತೆ. ಇದೀಗ ಸೊಸೆ ಸಹ ನೇಣಿಗೆ ಶರಣಾಗಿರುವುದು ಅನುಮಾನಕ್ಕೆಡೆಮಾಡಿಕೊಟ್ಟಿದೆ. ಅದರಲ್ಲೂ ನವ್ಯಶ್ರೀ ಪೋಷಕರು, ನವ್ಯಶ್ರೀ ಒಂಟಿತನಕ್ಕಿದ್ದುದ್ದಕ್ಕೆ ಈ ರೀತಿ ಆಗರಬಹುದೆಂದು ಅನುಮಾನ ವ್ಯಕ್ತಪಡಿಸುತ್ತಾರೆ.

ಒಟ್ಟಾರೆ ನವ್ಯಶ್ರೀ ಸಾವಿನ ಬಗ್ಗೆ ಇದೀಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲವಲವಿಕೆಯಿಂದಿದ್ದ, ಅದರಲ್ಲೂ ನಿನ್ನೆ ತುಳಸಿ ಹಬ್ಬದಲ್ಲೂ ಟಿಕ್ ಟಾಕ್ ಮಾಡಿದ್ದ ಈಕೆಗೆ ಸಾವು ತಂದು ಕೊಳ್ಳಲು ಕಾರಣವಾದ್ರೂ ಏನು ಎಂಬುದು ಪೊಲೀಸರ ತನಿಖೆಯಿಂದಲೇ ಹೊರಬರಬೇಕಿದೆ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ, ಶಿವಮೊಗ್ಗ.

RELATED ARTICLES

Related Articles

TRENDING ARTICLES