Monday, December 23, 2024

ಬಾಕ್ಸ್ ಆಫೀಸ್ ಕಲೆಕ್ಷನ್ ಉಡೀಸ್ ಮಾಡಿದ ‘ಕಾಂತಾರ’

ಬೆಂಗಳೂರು: ಬಿಡುಗಡೆಯಾದ ದಿನದಿಂದ ಇಡಿದು ಇಲ್ಲಿವರೆಗೂ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಹಣ ಗಳಿಕೆಯಲ್ಲಿಯೂ ಸಹ ಏನು ಹಿಂದೆ ಬಿದ್ದಿಲ್ಲ. ಮೊದಲು ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ನಂತರ ದಿನಗಳಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಾದ್ಯಂತ ಡಬ್ ಮಾಡಿದ ನಂತರ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದೆ.

ಕಳೆದ ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಕನ್ನಡದ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಾಂತಾರ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುವದರ ಮೂಲಕ ಪ್ರಾದೇಶಿಕ ಸಿನಿಮಾದ ಶಕ್ತಿಯನ್ನು ಸಾಬೀತುಪಡಿಸಿದೆ.

ಬಿಡುಗಡೆಯಾದ ದಿನದಿಂದ ಈವರೆಗೂ ರಿಷಭ್​ ನಟನೆಯ, ನಿರ್ದೇಶನದ ಕಾಂತಾರ 300 ಕೋಟಿಗೂ ಅಧಿಕ ಹಣ ಬಾಚಿದೆ. ನಟ ರಜನಿ ಕಾಂತ್​, ಕಾರ್ತಿ, ಧನುಷ್, ಎಬಿಡಿ ಸೇರಿದಂತೆ ಕಾಂತಾರ ಎಲ್ಲರೂ ಈ ಸಿನಿಮಾಗೆ ಫಿದಾ ಆಗಿ ಹಾಡಿ ಹೊಗಳಿದ್ದರು.

RELATED ARTICLES

Related Articles

TRENDING ARTICLES