Friday, November 22, 2024

ಈದ್ಗಾ ಮೈದಾನದಲ್ಲಿ ನ.15ರೊಳಗೆ ಕನ್ನಡ ಬಾವುಟ ಹಾರಿಸುವಂತೆ ಒತ್ತಾಯ

ಬೆಂಗಳೂರು: ಕೆಲ ತಿಂಗಳಿಂದ ಬೆಂಗಳೂರಿನ ದ ಸಖತ್ ಸುದ್ದಿಯಾಗ್ತಿದೆ. ಇತ್ತೀಚೆಗೆ ಅಂತೂ ಈದ್ಗಾ ಮೈದಾನ ಕನ್ನಡ ರಾಜ್ಯೋತ್ಸವ ವಿಚಾರದಲ್ಲೂ ಸುದ್ದಿಯಾಗಿತ್ತು. ನಾಗರಿಕರ ಒಕ್ಕೂಟ ಕಂದಾಯ ಇಲಾಖೆಗೆ ನವೆಂಬರ್ 1 ರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿದ್ರೂ ಅವಕಾಶ ಕೊಡಲಿಲ್ಲ. ಕಾನೂನು ವಿರುದ್ಧವಾಗಿ ಕನ್ನಡ ಧ್ವಜ ಹಾರಿಸುತ್ತೇವೆ ಎಂದಿದ್ದಕ್ಕೆ, ಇಡೀ ಮೈದಾನದ ಸುತ್ತಮುತ್ತ ಖಾಕಿ ಸರ್ಪಗಾವಲನ್ನ ಎಣಿಯಲಾಗಿದೆ.

ಹೌದು. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕನ್ನಡ ಬಾವುಟ ಹಾರಿಸೋದಕ್ಕೆ ಯಾರಿಗೂ ಸರ್ಕಾರ ಅನುಮತಿ ನೀಡಿಲ್ಲ. ಕಳೆದ 25 ದಿನಗಳ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಅನುಮತಿ ಕೋರಿ ನಾಗರಿಕರ ಒಕ್ಕೂಟ ಮನವಿ ಮಾಡಿಕೊಂಡಿತ್ತು. ಒಕ್ಕೂಟ ಮನವಿ ಮೇರೆಗೆ ಕಂದಾಯ ಇಲಾಖೆಗೆ ಅನುಮತಿ ಕೋರಿ ಸೂಕ್ತ ನಿರ್ದೇಶನ ನೀಡುವಂತೆ ಪತ್ರ ಬರೆದಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಪತ್ರ ಬರೆದಿದ್ದರು. ಆದರೆ ಕಂದಾಯ ಇಲಾಖೆಯಿಂದ ಯಾವುದೇ ಸಲಹೆ, ಸೂಚನೆ ಬಂದಿಲ್ಲ. ಹೀಗಾಗಿ ಈದ್ಗಾ ಮೈದಾನದಲ್ಲಿ ಕನ್ನಡ ಬಾವುಟ ಹಾರಿಸೋಕೆ ಅಧಿಕೃತ ಅನುಮತಿ ಯಾರಿಗೂ ನೀಡಿಲ್ಲ. ಹೀಗಾಗಿ ಕನ್ನಡ ಭಾವುಟ ಹಾರಲೇಬೇಕು ಅಂತ ಚಾಮರಾಜಪೇಟೆ ನಾಗರೀಕ ಒಕ್ಕೂಟ ನಿರಂತರ ಹೋರಾಟ ಮಾಡುತ್ತಿದೆ.

ಇನ್ನೂ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅನುಮತಿ ನೀಡದಿದ್ದಕ್ಕೆ ಸರ್ಕಾರದ ವಿರುದ್ಧ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಅಸಮಾಧಾನ ಹೊರಹಾಕಿದೆ. ನವೆಂಬರ್ 30ರೊಳಗೆ ಯಾವುದಾದ್ರೂ ಒಂದು ದಿನ ಆಚರಣೆ ಮಾಡಲು ಆರ್‌.ಅಶೋಕ್ ಹೇಳಿದ್ದಾರೆ.‌ ನಮಗೆ ಅದು ಬೇಡ ನ.15ರೊಳಗೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಅಂತ ಸರ್ಕಾರಕ್ಕೆ ಮತ್ತೆ ಗಡುವು ಕೊಟ್ಟಿದೆ. ಕಾನೂನು ತಜ್ಞರ ಸಲಹೆ ಪಡೆದು ಕೂಡಲೇ ಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು. ಇಲ್ಲವಾದ್ರೆ ಮುಂದಿನ ಹೋರಾಟ ಉಗ್ರವಾಗಿರುತ್ತದೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆ ಅನುಮತಿ ನೀಡಿದಿದ್ರೆ ನವೆಂಬರ್ 1 ರಂದು ಈದ್ಗಾ ಮೈದಾನದಲ್ಲಿ ಕನ್ನಡ ಧ್ವಜ ಹಾರಾಡಬೇಕಿತ್ತು. ಆದ್ರೆ, ಈ ಕಾರ್ಯಕ್ರಮ ನಡೆಯದ ಹಿನ್ನೆಲೆ, ಚಾಮರಾಜಪೇಟೆ ನಾಗರಿಕರ ಒಕ್ಕೂಟ ನವೆಂಬರ್15 ರೊಳಗೆ ನಡೆಸಿ ಅಂತ ಒತ್ತಾಯಿಸುತ್ತಿದೆ. ಸರ್ಕಾರ ಈ ವಿಚಾರವಾಗಿ ಮುಂದೆ ಯಾವ ನಿಲುವನ್ನ ತೆಗೆದುಕೊಳ್ಳುತ್ತದೆ ಅನ್ನೋದು ಕುತೂಹಲ ಕೆರಳಿಸಿದೆ.

RELATED ARTICLES

Related Articles

TRENDING ARTICLES