Wednesday, January 22, 2025

T-20 ಸಮಿಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನ ಎದುರಿಸಲಿರುವ ಭಾರತ.!

ಆಸ್ಟ್ರೇಲಿಯಾ; ವಿಶ್ವಕಪ್ ಸೂಪರ್ 12 ಗ್ರೂಪ್​ ಬಿ ಹಂತದಲ್ಲಿ ನಡೆದ ಇಂದಿನ ಟಿ-20 ಪಂದ್ಯವನ್ನ ಜಿಂಬಾಬ್ವೆ ತಂಡವನ್ನ ಭಾರತ ಬಗ್ಗು ಬಡಿದಿದೆ.

ಇಂದು ಆಸ್ಟ್ರೇಲಿಯಾ ಮೆಲ್ಬೋರ್ನ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 5 ವಿಕೆಟ್‌ಗೆ 186 ರನ್‌ಗಳನ್ನ ಗಳಿಸಿತು. ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಔಟಾಗದೆ 61 ರನ್ ಕಲೆಹಾಕಿದರು.  ಭಾರತದ 187 ರನ್​ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ತಂಡ 17.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್​​ ಕಳೆದುಕೊಂಡು 115 ರನ್‌ಗಳಿಗೆ ಆಲೌಟ್ ಆಯಿತು. ರವಿಚಂದ್ರನ್ ಅಶ್ವಿನ್ ತಮ್ಮ ನಾಲ್ಕು ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು.

ಭಾರತ ಗೆಲುವು ಸಾಧಿಸುತ್ತಿದ್ದಂತೆ ಗ್ರೂಪ್​ ಬಿ ಹಂತದ ಅಂಕಪಟ್ಟಿಯ ತಂಡಗಳಲ್ಲಿ ಮೊದಲ ಸ್ಥಾನವನ್ನ ಭಾರತ, ಎರಡನೇ ಸ್ಥಾನವನ್ನ ಪಾಕಿಸ್ತಾನ ತಂಡ ಪಡೆದಿದೆ. ಇನ್ನು ಗ್ರೂ ಬಿ ಹಂತದ ಅಂಕಪಟ್ಟಿಯ ಮೊದಲ ಸ್ಥಾನವನ್ನ ನ್ಯೂಜಿಲೆಂಡ್​, ಎರಡನೇ ಸ್ಥಾನವನ್ನ ಇಂಗ್ಲೆಂಡ್​ ಪಡೆದಿದೆ.

ನವೆಂಬರ್ 10ರಂದು ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಅಡಿಲೇಡ್‌ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ನವೆಂಬರ್ 9 ರಂದು ಈ ಪಂದ್ಯ ನಡೆಯಲಿದೆ.

RELATED ARTICLES

Related Articles

TRENDING ARTICLES