Monday, December 23, 2024

‘ಕುರಿ ಕೊಟ್ಟಿಗೆಯಲ್ಲಿ ಸಿಲುಕಿದ ಚಿರತೆ.’..!

ಮಂಡ್ಯ: ಮಂಡ್ಯ ಜಿಲ್ಲೆ ಕುಂದನಕುಪ್ಪೆ ಗ್ರಾಮದಲ್ಲಿ ಕುರಿ ಕೊಟ್ಟಿಗೆಯಲ್ಲಿ ಚಿರತೆ ಸಿಲುಕಿದೆ. ಕುಂದನಕುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುಂದನಕುಪ್ಪೆ ಗ್ರಾಮ.

ಕುರಿ-ಮೇಕೆ ಕಟ್ಟಿದ ಕೊಟ್ಟಿಗೆಯೊಳಗೆ ನುಗ್ಗಿ ಸಿಲುಕಿಕೊಂಡ ಚಿರತೆ. ಬೆಳಗ್ಗಿನ ಜಾವ ಕುರಿ ತಿನ್ನಲು ಹೋದ ಚಿರತೆ.ಕಬ್ಬಿಣದ ಕೊಟ್ಟಿಗೆಯೋಳಗೆ ಸಿಲುಕಿ ಬೀಳು ಬಿಟ್ಟಿರುವ ಚಿರತೆ.

ಚಿರತೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ.ಗ್ರಾಮದಲ್ಲಿ ಹಲವು ದಿನಗಳಿಂದ ಜನರನ್ನ ನಿದ್ದೆ ಗೆಡೆಸಿದ್ದ ಚಿರತೆ.ಚಿರತೆ ಕೊಟ್ಟಿಗೆಯೊಳಗೆ ಹೋಗುತ್ತಿರುವ ವಿಡಿಯೋವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದ ಗ್ರಾಮಸ್ಥರು.ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಭೇಟಿ.
ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸತತ ಪ್ರಯತ್ನ ಮಾಡುತ್ತೊದ್ದಾರೆ.

RELATED ARTICLES

Related Articles

TRENDING ARTICLES