ವಿಜಯಪುರ; ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಧ್ಯಾನಕ್ಕೆ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಶೈಲ ಪೀಠದ ಜಗದ್ಗುರು ಚೆನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಅವರು ಸರ್ಕಾರದ ಆದೇಶ ಸ್ವಾಗತಿಸಿದ್ದಾರೆ.
ಯಡಿಯೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ವೇಳೆ ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಧ್ಯಾನವು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯ ಟಾನಿಕ್, ಯಾವ ರಂಗಕ್ಕೆ ಧ್ಯಾನ ಸೀಮಿತ ಆಗಿಲ್ಲ. ಯಾವುದೋ ಒಂದು ಜಾತಿ, ಹೆಣ್ಣು ಗಂಡು, ವೃತ್ತಿಗೆ ಧ್ಯಾನ ಸಂಬಂಧಿಸಿದ್ದಲ್ಲ. ಧ್ಯಾನ ಅನ್ನೋದು ಎಲ್ಲರಿಗೂ ಸಂಬಂಧಿಸಿದ ಸಂಗತಿ. ಧ್ಯಾನ ಯಾರು ಮಾಡ್ತಾರೋ, ಯಾವ ಕೆಲಸ ಮಾಡಿದ್ರು, ಧ್ಯಾನ ಮಾಡದಿರುವನಕ್ಕಿಂತ ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ ಎಂದರು.
ರಾಜ್ಯ ಸರ್ಕಾರ ಆದೇಶಿದ ಧ್ಯಾನವು ವಿದ್ಯಾರ್ಥಿಗಳ ಮನಸ್ಸನ್ನು ಕಂಟ್ರೋಲ್ ಮಾಡುತ್ತದೆ. ಮನಸ್ಸು ಚೈತನ್ಯಯುಕ್ತವಾಗಿಡಲು ಕಾರಣವಾಗುತ್ತದೆ. ಎಲ್ಲಾ ಜನರು ಕೂಡಾ ಸರ್ಕಾರದ ಆದೇಶವನ್ನು ಬೆಂಬಲಿಸಬೇಕು ಎಂದು ಶ್ರೀಶೈಲ ಜಗದ್ಗುರು ಸ್ವಾಮೀಜಿ ತಿಳಿಸಿದರು.
ಕೆಲವರು ವಿರೋಧ ವಿಚಾರವಾಗಿ ಮಾತನಾಡಿ, ಧ್ಯಾನವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಧ್ಯಾನದ ಮತ್ತೊಂದು ಮುಖನೇ ಪ್ರಾರ್ಥನೆ. ಪ್ರಾರ್ಥನೆ ಒಮ್ಮೊಮ್ಮೆ ವ್ಯವಸ್ಥೆ, ಸಮುದಾಯಕ್ಕೆ ಸೀಮಿತವಾಗಬಹುದು. ಆದ್ರೆ ಧ್ಯಾನ ಅನ್ನೋದು ಯಾವುದಕ್ಕೂ ಸೀಮಿತವಲ್ಲ. ಎಲ್ಲಾ ರಂಗದಲ್ಲಿರುವವರು, ಎಲ್ಲಾ ಜಾತಿ, ಸಮುದಾಯದವರು ತಮ್ಮ ಕಾರ್ಯ ಕ್ಷೇತ್ರದಲ್ಲಿ ಧ್ಯಾನ ಅಳವಡಿಸಿಕೊಳ್ಳಬೇಕು. ಹೆಚ್ಚಿನ ಸಾಧನೆ ಮಾಡೋದಕ್ಕೆ ಧ್ಯಾನ ಅನುಕೂಲ ಆಗುತ್ತದೆ ಎಂದು ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದರು.